intensity ಇಂಟೆನ್ಸಿಟಿ
ನಾಮವಾಚಕ
  1. ತೀವ್ರತೆ; ಗಾಢತೆ; ತೀಕ್ಷ್ಣತೆ; ಉಗ್ರತೆ; ಕಟುತ್ವ; ಕಡುಪು; ಪ್ರಬಲತೆ; ಪ್ರಖರತೆ: the intensity of the sun’s rays ಸೂರ್ಯಕಿರಗಳ ಪ್ರಖರತೆ.
  2. (ಭಾವನೆ ಮೊದಲಾದವುಗಳ ವಿಷಯದಲ್ಲಿ) ತೀವ್ರತೆ; ಗಾಢತೆ: intensity of his nature ಅವನ ಗಾಢಸ್ವಭಾವ.
  3. ಭಾವೋತ್ಕರ್ಷ; ಭಾವೋತ್ಕಟತೆ; ಭಾವನೆಯ ಸೆಳೆತ: the intensity of great poetry ಶ್ರೆಷ್ಠಕಾವ್ಯದ ಭಾವೋತ್ಕಟತೆ.
  4. ದೃಢತೆ; ಆಚಲನೀಯತೆ: the intensity of his belief ಅವನ ದೃಢಶ್ರದ್ಧೆ.
  5. (ಭೌತವಿಜ್ಞಾನ) (ಯಾವುದೇ ಗುಣದ, ಉದಾಹರಣೆಗೆ ಬಲ, ಪ್ರಕಾಶತೆ, ಕಾಂತೀಯತೆ, ಮೊದಲಾದವುಗಳ) ಅಳೆಯಬಲ್ಲ ಪ್ರಮಾಣ.