intend ಇಂಟೆಂಡ್‍
ಸಕರ್ಮಕ ಕ್ರಿಯಾಪದ
  1. ಉದ್ದೇಶಿಸು; ಇಚ್ಛಿಸು; ಬಯಸು; ಸಂಕಲ್ಪಿಸು; ಗುರಿಹೊಂದಿರು; ಬಗೆ; ಕುರಿ: we intend no harm ಕೇಡು ಮಾಡಬೇಕೆಂಬುದು ನಮ್ಮ ಉದ್ದೇಶವಲ್ಲ. was this intended? ಇದನ್ನು ಉದ್ದೇಶಪಟ್ಟು ಮಾಡಲಾಯಿತೇ?
  2. (ಭೂತಕೃದಂತದಲ್ಲಿ)
    1. ಉದ್ದಿಷ್ಟ; ಉದ್ದೇಶಿಸಿದ.
    2. ಉದ್ದೇಶದಿಂದ ಮಾಡಿದ; ಉದ್ದೇಶಪೂರ್ವಕವಾದ.
  3. (ವರ್ತಮಾನ ಕೃದಂತದಲ್ಲಿ) ಉದ್ದೇಶಿಸು; ಬರಲು, ಮಾಡಲು – ಉದ್ದೇಶವಿರು, ಇಷ್ಟಪಡು: an intending visitor ಭೇಟಿಯ ಉದ್ದೇಶವಿರುವವನು.
  4. (ಯಾವುದಾದರೂ ವಸ್ತುವನ್ನು, ವ್ಯಕ್ತಿಯನ್ನು ಒಂದು ಉದ್ದೇಶ ಮೊದಲಾದವಕ್ಕೆ) ಉದ್ದೇಶಿಸು; ಇಡು; ತೆಗೆದಿಡು; ಕಾದಿರಿಸು; ಈಸಲಾಗಿಡು; ಗೊತ್ತು ಮಾಡು; ಉಜ್ಜುಗಿಸು; ತಯಾರಿಸು; ನಿಯೋಜಿಸು: we intend our son for the Bar ನಮ್ಮ ಮಗ ಲಾಯರ್‍ ಆಗಲೆಂದು ಉದ್ದೇಶಿಸಿದ್ದೇವೆ. this fruit is intended for you ಈ ಹಣ್ಣನ್ನು ನಿನಗಾಗಿ ಇಟ್ಟಿದೆ. this daub is intended for me ಈ ಬಣ್ಣದ ಬೊಟ್ಟು ನನಗಾಗಿ ಇದೆ (ನನ್ನನ್ನು ಪ್ರತಿನಿಧಿಸುತ್ತದೆ, ನನ್ನನ್ನು ಸಂಕೇತಿಸುತ್ತದೆ).
  5. ಅಭಿಪ್ರಾಯಪಡು; ಅರ್ಥನೀಡು: what exactly do you intend by the word? ಈ ಪದಕ್ಕೆ ಖಚಿತವಾಗಿ ನಿನ್ನ ಅರ್ಥವೇನು?