intellectualize ಇಂಟ(ಟಿ)ಲೆಕ್ಟ್ಯುಅಲೈಸ್‍
ಸಕರ್ಮಕ ಕ್ರಿಯಾಪದ

ಬೌದ್ಧೀಕರಿಸು; ವೈಚಾರಿಕ ಗುಣವನ್ನು ಯಾ ಸ್ವರೂಪವನ್ನು ನೀಡು: to intellectualize problems ಸಮಸ್ಯೆಗಳನ್ನು ಬೌದ್ಧೀಕರಿಸುವ ಪ್ರವೃತ್ತಿ.

ಅಕರ್ಮಕ ಕ್ರಿಯಾಪದ
  1. ಬೌದ್ಧಿಕವಾಗು; ವೈಚಾರಿಕ ಗುಣ ಯಾ ಸ್ವರೂಪವನ್ನು ಪಡೆದುಕೊ.
  2. ಬೌದ್ಧಿಕ ಕ್ರಿಯೆಯಲ್ಲಿ, ವ್ಯಾಪಾರದಲ್ಲಿ – ತೊಡಗು.
  3. ಬೌದ್ಧಿಕವಾಗಿ – ಬರೆ ಯಾ ಮಾತನಾಡು.
  4. ತರ್ಕಿಸು; ಚರ್ಚಿಸು; ತರ್ಕಮಾಡು; ತಾತ್ತ್ವಿಕ ಚಿಂತನೆಯಲ್ಲಿ ತೊಡಗು.