intellectualism ಇಂಟ(ಟಿ)ಲೆಕ್ಟ್ಯುಅಲಿಸಮ್‍
ನಾಮವಾಚಕ
  1. ವಿಚಾರವಾದ; ಪ್ರಜ್ಞಾ(ಪ್ರಾಧಾನ್ಯ)ವಾದ; ಕೇವಲ ಬುದ್ಧಿ, ವಿಚಾರ ಯಾ ತರ್ಕದಿಂದ ಮಾತ್ರವೇ ಜ್ಞಾನವು ಪೂರ್ಣವಾಗಿ ಯಾ ಮುಖ್ಯವಾಗಿ ಬರುವುದೆಂಬ ಸಿದ್ಧಾಂತ.
  2. ವೈಚಾರಿಕತೆ; ಭಾವುಕತೆಗೆ ವಿರುದ್ಧವಾಗಿ, ಮುಖ್ಯವಾಗಿ ಕೇವಲ ಬುದ್ಧಿಯ ಬಳಕೆ ಯಾ ಪ್ರಯೋಗ.
  3. ಬುದ್ಧಿಭಕ್ತಿ; ಬೌದ್ಧಿಕ ಸಂಸ್ಕೃತಿ ಯಾ ಚಟುವಟಿಕೆಗಳಲ್ಲಿ ಆಸಕ್ತಿ, ಭಕ್ತಿ.