See also 2integrate
1integrate ಇನ್ಟಿಗ್ರಟ್‍
ಗುಣವಾಚಕ
  1. ಸಾವಯವಿ; ಅಂಗಿ; ಭಾಗಗಳು ಕೂಡಿ ಆದ; ಭಾಗಗಳಿಂದಾದ.
  2. ಪೂರ್ಣ; ಸಮಗ್ರ.
See also 1integrate
2integrate ಇನ್ಟಿಗ್ರಟ್‍
ಸಕರ್ಮಕ ಕ್ರಿಯಾಪದ
  1. ಸಮಗ್ರವಾಗಿಸು; ಪೂರ್ಣಗೊಳಿಸು; (ಅಪೂರ್ಣವಾದದ್ದಕ್ಕೆ) ಇತರ ಭಾಗಗಳನ್ನು ಸೇರಿಸಿ ಪೂರ್ಣ ಮಾಡು, ಪೂರೈಸು.
  2. ಏಕೀಕರಿಸು; (ಬೇರೆಬೇರೆಯಾಗಿರುವ ಭಾಗಗಳನ್ನು) ಸಮಾವೇಶಗೊಳಿಸು; ಸಂಘಟಿಸು; ಸಂಯೋಜಿಸು – ಪೂರ್ಣಗೊಳಿಸು, ಪೂರ್ಣವನ್ನಾಗಿ ಮಾಡು.
  3. (ಗಣಿತ) ಅನುಕಲಿಸು; ಅನುಕಲವನ್ನು ಕಂಡುಹಿಡಿ.
  4. (ಗಣಿತ) (ಮುಖ್ಯವಾಗಿ ಭೂತಕೃದಂತದಲ್ಲಿ) ಅನುಕಲಿಸು; ಕ್ರಮವಾಗಿ ವ್ಯತ್ಯಾಸವಾಗುತ್ತಿರುವ (ವಿಸ್ತೀರ್ಣ, ತಾಪ, ಮೊದಲಾದ) ಪರಿಮಾಣದ ಮೊತ್ತವನ್ನು ಯಾ ಸರಾಸರಿಯನ್ನು ಕಂಡುಹಿಡಿ.
  5. (ಮುಖ್ಯವಾಗಿ ಕುಲ ಯಾ ಧರ್ಮದ ಪರಿಗಣನೆಯಿಲ್ಲದೆ) ಸಮಾಜದ ಸಮಾನವಾದ ಅಂಗವಾಗಿಸು, ಭಾಗವಾಗಿಸು.
  6. ಒಂದಾಗಿಸು: ಏಕೀಕರಿಸು; ಪ್ರತ್ಯೇಕತೆಯನ್ನು – ತೊಡೆದು ಹಾಕು, ತೊಡೆ, ಕೊನೆಗಾಣಿಸು.
ಅಕರ್ಮಕ ಕ್ರಿಯಾಪದ
  1. ಒಂದಾಗು; ಏಕೀಕೃತವಾಗು; ಸಮಾವೇಶವಾಗು; ಸಂಘಟಿತವಾಗು; ಸಮಗ್ರವಾಗು.
  2. (ಮುಖ್ಯವಾಗಿ ಕುಲ ಯಾ ಧರ್ಮದ ಪರಿಗಣನೆಯಿಲ್ಲದೆ) ಸಮಾಜದ ಸಮಾನವಾದ ಅಂಗವಾಗು; ಭಾಗವಾಗು.
  3. ಭೇದವನ್ನು, ಪ್ರತ್ಯೇಕತೆಯನ್ನು – ತೊಡೆ, ಪರಿಹರಿಸು, ಮುಗಿಸು, ಕೊನೆಗೊಳಿಸು.