See also 2integral
1integral ಇನ್ಟಿಗ್ರಲ್‍
ಗುಣವಾಚಕ
  1. ಸಮಗ್ರವಾಗಿರುವುದರ.
  2. ಸಮಗ್ರಕತಾವಶ್ಯಕ; ಪೂರ್ಣತಾವಶ್ಯಕ; ಒಂದು ಒಟ್ಟನ್ನು ಸಮಗ್ರವಾಗಿಸಲು, ಪೂರ್ಣಗೊಳಿಸಲು ಬೇಕಾದ.
  3. ಸಂಪೂರ್ಣ; ಸಮಗ್ರ; ಅವಿಭಾಜ್ಯ.
  4. (ಗಣಿತ) ಪೂರ್ಣಾಂಕೀಯ; ಪೂರ್ಣಾಂಕದ; ಪೂರ್ಣಾಂಕದಿಂದ ಸೂಚಿತವಾದ.
  5. (ಗಣಿತ) ಪೂರ್ಣಾಂಕ; ಪೂರ್ಣಾಂಕೀಯ; ಪೂರ್ಣಾಂಕಗಳಿಂದಾದ; ಪೂರ್ಣಾಂಕಗಳನ್ನೊಳಗೊಂಡ (ಉದಾಹರಣೆಗೆ ಫಲನವೊಂದರ ಸಹಾಂಕಗಳುಳ್ಳ).
See also 1integral
2integral ಇನ್ಟಿಗ್ರಲ್‍
ನಾಮವಾಚಕ
  1. (ಗಣಿತ) ಅನುಕಲ; ಯಾವುದೇ ಗಣಿತೋಕ್ತಿಯ ಯಾವ ಇನ್ನೊಂದು ವಿಕಲನೋತ್ಪನ್ನವಾಗಿದೆಯೋ ಆ ಉಕ್ತಿ.
  2. (ಗಣಿತ) ಅನುಕಲ; ಗಣಿತೀಯ ಅನುಕಲನದ ಪರಿಣಾಮವಾಗಿ ದೊರೆತದ್ದು; ದತ್ತಫಲನ ಯಾವ ಫಲನದ ನಿಷ್ಪನ್ನವಾಗಿದೆಯೋ ಆ ಫಲನ.
  3. ಅಖಂಡ, ಸಮಗ್ರ, ಪೂರ್ಣ – ವಸ್ತು.
ಪದಗುಚ್ಛ
  1. definite integral ನಿರ್ದಿಷ್ಟ ಅನುಕಲ; ನಿರ್ದಿಷ್ಟ ಎರಡು ಮಿತಿಗಳ ಮಧ್ಯೆ ಪಡೆದ ಅನುಕಲ.
  2. indefinite integral ಅನಿರ್ದಿಷ್ಟ ಅನುಕಲ; ಮಿತಿಗಳನ್ನು ವಿಧಿಸದೆ ಅನುಕಲನ ಮಾಡಿದ ಫಲವಾಗಿ ದೊರೆತ ಸಂಕರಿಕ ಸ್ಥಿರವುಳ್ಳ ಅನುಕಲ.