intake ಇನ್‍ಟೇಕ್‍
ನಾಮವಾಚಕ
  1. ಒಳತೆಗೆದುಕೊಳ್ಳುವುದು; ಒಳಕ್ಕೆ ತೆಗೆದುಕೊಳ್ಳುವುದು; ಅಂತರ್ಗ್ರಹಣ; ಅಂತರಾಧಾನ; ಅಂತರಾವೇಶನ.
  2. ಒಳಗಂಡಿ; ಒಳಹಾಯಿಕೆ; ನೀರುಗಂಡಿ; ನೀರನ್ನು ಒಳಹಾಯಿಸುವ ಸ್ಥಳ; ನದಿ ಮೊದಲಾದವುಗಳಿಂದ ಕಾಲುವೆಗೆ ಯಾ ಕೊಳಾಯಿಗೆ ನೀರನ್ನು ತೆಗೆದುಕೊಳ್ಳುವ ಸ್ಥಳ.
  3. ಇಂಧನ ಗಂಡಿ ಯಾ ಗಾಳಿ ಗಂಡಿ; ಇಂಧನ ಯಾ ಗಾಳಿ ಎಂಜಿನನ್ನು ಸೇರುವ, ಪ್ರವೇಶಿಸುವ ಸ್ಥಳ.
  4. (ಗಣಿಯಲ್ಲಿಯ) ಗಾಳಿ ದಾರಿ; ಗಾಳಿನಾಲೆ; ವಾಯುಮಾರ್ಗ.
  5. (ಕೊಳವೆ, ಕಾಲುಚೀಲ, ಮೊದಲಾದವಲ್ಲಿ) ಥಟ್ಟನೆ ಅಗಲ ಕಿರಿದಾಗುವ ಭಾಗ ಯಾ ಥಟ್ಟನೆ ಅಗಲ ಕಿರಿದಾಗುವುದು.
  6. ಸ್ವೀಕೃತ, ಗೃಹೀತ – ಮೊತ್ತ; ಒಳಕ್ಕೆ ತೆಗೆದುಕೊಂಡ ವಸ್ತು, ವ್ಯಕ್ತಿ, ಮೊದಲಾದವು ಯಾ ಅವುಗಳ ಮೊತ್ತ.
  7. (ಉತ್ತರ ಇಂಗ್ರೆಂಡಿನ ಪ್ರಯೋಗ) (ಕುರುಚಲು ಕಾಡನ್ನು ಕಡಿದು) ಉಪಯೋಗಕ್ಕೆ ತಂದ ನೆಲ.