intact ಇನಾಟ್ಯಾಕ್ಟ್‍
ಗುಣವಾಚಕ
  1. (ಆತಂಕ, ತೊಂದರೆ, ಮೊದಲಾದ ಯಾವುದೂ) ತಟ್ಟದ; ಮುಟ್ಟದ; ಸ್ಪರ್ಶಿಸದ; ಅಸ್ಪೃಷ್ಟ.
  2. ಅಖಂಡವಾಗಿರುವ; ಸಂಪೂರ್ಣವಾಗಿರುವ; ಪೂರ್ಣ ಸ್ಥಿತಿಯಲ್ಲಿರುವ: an oriental city almost intact ಅಖಂಡವಾಗುಳಿದಿರುವ ಪೌರಸ್ತ್ಯ ನಗರ.
  3. ಅಚ್ಚಳಿಯದ; ಹಾನಿ ತಟ್ಟಿಲ್ಲದ; ವಿಕಲವಾಗದ; ಶಿಥಿಲವಾಗಿಲ್ಲದ; ಕೆಟ್ಟಿಲ್ಲದ; ಕುಂದಿಲ್ಲದ: houses largely intact after 3500 years 3500 ವರ್ಷಗಳ ನಂತರವೂ ಬಹುತೇಕ ಅಚ್ಚಳಿಯದಿರುವ ಮನೆಗಳು.
  4. (ದೇಹದ ಅಂಗಾಂಗಗಳು ಮೊದಲಾದವುಗಳ ವಿಷಯದಲ್ಲಿ) ಊನವಾಗದ; ಅಖಂಡ; ಅವಿಕಲ; ಅನ್ಯೂನ.