insure ಇನ್ಷುಅರ್‍
ಸಕರ್ಮಕ ಕ್ರಿಯಾಪದ
  1. ವಿಮಾಕಂತನ್ನು ಕೊಟ್ಟು, (ಆಸ್ತಿ, ಜೀವ, ವ್ಯಕ್ತಿ, ಮೊದಲಾದವರಿಗೆ ಹಾನಿ, ಸಾವು ಯಾ ನಷ್ಟವುಂಟಾದರೆ ನಿರ್ದಿಷ್ಟ ಮೊತ್ತದ ಹಣವನ್ನು ವಿಮಾ ಸಂಸ್ಥೆ ಕೊಡುವಂತೆ) ವಿಮೆ – ಮಾಡು, ಇಳಿಸು.
  2. (ಆಸ್ತಿಯ ಮಾಲೀಕನ ಅಥವಾ ವಿಮಾ ಕಂಪೆನಿಯ ವಿಷಯದಲ್ಲಿ, ಮೇಲಿನ ರೀತಿಯ ಭರವಸೆ ನೀಡಿ) ವಿಮೆ ಹಣ ಪಡೆ.
  3. (ಅಮೆರಿಕನ್‍ ಪ್ರಯೋಗ) ದೃಢಪಡಿಸು; ಖಚಿತಪಡಿಸು.
  4. ಆಕಸ್ಮಿಕವಾಗಿ ಸಂಭವಿಸಬಹುದಾದದ್ದಕ್ಕೆ, ಸಮಯಕ್ಕೆ ಇರಲಿ ಎಂದು ಒದಗಿಸು, ಇಟ್ಟುಕೊ, ಹವಣಿಸಿಕೊ: insured themselves against the rain by taking umbrellas ಮಳೆ ಬಂದರೆ ಇರಲಿ ಎಂದು ಅವರು ಕೊಡೆಗಳನ್ನು ಇಟ್ಟುಕೊಂಡರು.
ಪದಗುಚ್ಛ

the insured ವಿಮೆದಾರ; ಯಾರಿಗೆ ವಿಮೆಯ ಮೊತ್ತ ಕೊಡಬೇಕೆಂದು ಭದ್ರಪಟ್ಟಿದೆಯೋ ಆ ವ್ಯಕ್ತಿ.