insular ಇನ್‍ಸ್ಯುಲರ್‍
ಗುಣವಾಚಕ
  1. ನಡುಗಡ್ಡೆಯ; ದ್ವೀಪದ.
  2. ದ್ವೀಪದಂಥ; ದ್ವೀಪೀಯ; ದ್ವೀಪ ರೂಪದ, ಲಕ್ಷಣದ.
  3. (ಪೂರ್ವ ಮಧ್ಯಯುಗದ ಬ್ರಿಟಿಷ್‍ ದ್ವೀಪದಲ್ಲಿ ಬಳಕೆಯಲ್ಲಿದ್ದ ಒಂದು ರೀತಿ ಲ್ಯಾಟಿನ್‍) ಕೈಬರಹಕ್ಕೆ ಸಂಬಂಧಿಸಿದ.
  4. ಸಂಕುಚಿತ ಭಾವನೆಯ; ಸಣ್ಣ ಮನಸ್ಸಿನ; ಸಂಕುಚಿತ ಮನಸ್ಸುಳ್ಳ.
  5. (ದ್ವೀಪವಾಸಿಗಳ ಯಾ ದ್ವೀಪವಾಸಿಗಳಂಥ) ಮುಖ್ಯವಾಗಿ ಬೇರೆ ದೇಶ ಸಂಸ್ಕೃತಿಗಳ ಬಗ್ಗೆ ಅಜ್ಞಾನವನ್ನೂ ಉದಾಸೀನತೆಯನ್ನೂ ತಳೆದಿರುವ.
  6. (ಹವಾಗುಣದ ವಿಷಯದಲ್ಲಿ) ಸಮಧಾತುವಾದ; ಹಾಳತವಾದ; ಒಂದೇ ಸಮನಾಗಿರುವ.