insufflate ಇನ್‍ಸಹ್ಲೇಟ್‍
ಸಕರ್ಮಕ ಕ್ರಿಯಾಪದ
  1. (ವೈದ್ಯಶಾಸ್ತ್ರ) (ಗಾಳಿ, ಅನಿಲ, ಪುಡಿ, ಮೊದಲಾದವನ್ನು ಒಡಲಿನ ಕುಹರ ಮೊದಲಾದವಕ್ಕೆ) ಊದು; ತುಂಬು; ಹೊಡೆ; ಉರುಬು: insufflate a room with insecticide ಕೊಠಡಿಯೊಳಕ್ಕೆ ಕ್ರಿಮಿನಾಶಕವನ್ನು ಹೊಡೆ.
  2. (ಮೂಗು ಮೊದಲಾದವಕ್ಕೆ) ಊದಿ ಚಿಕಿತ್ಸೆ ಮಾಡು.
  3. (ದೇವತಾಶಾಸ್ತ್ರ) ಆಧ್ಯಾತ್ಮಿಕ ಪ್ರಭಾವದ ಸಂಕೇತವಾಗಿ (ಒಬ್ಬನ ಮೇಲೆ ಗಾಳಿ ಯಾ ಉಸಿರು) ಊದು.