instruction ಇನ್‍ಸ್ಟ್ರಕ್‍ಷನ್‍
ನಾಮವಾಚಕ
  1. ಬೋಧನೆ; ಶಿಕ್ಷಣ: new theories of instruction ಬೋಧನೆಯ ಹೊಸ ಸಿದ್ಧಾಂತಗಳು.
  2. (ಬಹುವಚನದಲ್ಲಿ) ಸೂಚನೆಗಳು; ತಿಳಿವಳಿಕೆ; ಅಪ್ಪಣೆ; ಆಜ್ಞೆ; ಹುಕುಮು; ಆದೇಶ: the company had secret instructions to take him ಅವನನ್ನು ತೆಗೆದುಕೊಳ್ಳಲು ಕಂಪೆನಿಗೆ ರಹಸ್ಯ ಅಪ್ಪಣೆಯಾಗಿತ್ತು.
  3. (ಬಹುವಚನದಲ್ಲಿ) (ಸಹಾಯ ವಕೀಲನಿಗೆ ಯಾ ಬ್ಯಾರಿಸ್ಟರ್‍ಗೆ ನೀಡುವ) ಸೂಚನೆಗಳು; ಮಾಹಿತಿ; ವಿಷಯ ಪರಿಚಯ.
  4. ಸೂಚನೆ; ಆದೇಶ; ಯಾವುದೇ ಕಾರ್ಯದ ಲಕ್ಷಣ ಮತ್ತು ನಿರ್ವಹಣೆಗಳನ್ನು ತಿಳಿಸಲು ಕಂಪ್ಯೂಟರಿಗೆ ಕೊಡುವ ಸೂಚನೆ, ಆದೇಶ.