instruct ಇನ್‍ಸ್ಟ್ರಕ್ಟ್‍
ಸಕರ್ಮಕ ಕ್ರಿಯಾಪದ
  1. ಬೋಧಿಸು; ಕಲಿಸು; ಹೇಳಿಕೊಡು; ಶಿಕ್ಷಣಕೊಡು; ಪಾಠ ಹೇಳು: instruct a class in history ಚರಿತ್ರೆಯ ಪಾಠ ಹೇಳು.
  2. ( – ಎಂದು) ತಿಳಿಸು; ತಿಳಿಯಪಡಿಸು; ತಿಳಿವಳಿಕೆ ಕೊಡು: instructed us that the dressing room was downstairs ಉಡುಪಿನ ಕೋಣೆ ಕೆಳ ಅಂತಸ್ತಿನಲ್ಲಿದೆಯೆಂದು ನಮಗೆ ತಿಳಿಸಿದರು.
  3. (ಬ್ರಿಟಿಷ್‍ ಪ್ರಯೋಗ) (ಕಕ್ಷಿಗಾರ ಸಲಹಾ ವಕೀಲನಿಗೆ ಯಾ ಬ್ಯಾರಿಸ್ಟರನಿಗೆ) ವಿಷಯವನ್ನು, ಸಮಾಚಾರವನ್ನು ತಿಳಿಸು.
  4. (ಕಾರ್ಯ ಮಾಡಲು ವ್ಯಕ್ತಿಗೆ) ಸೂಚನೆ ಕೊಡು; ಆದೇಶಿಸು; ಆಜ್ಞಾಪಿಸು; ಅಪ್ಪಣೆ ಕೊಡು; ಆಜ್ಞೆ ಮಾಡು; ನಿರ್ದೇಶಿಸು; ವಿಧಿಸು: instruct him to start early ಅವನಿಗೆ ಬೇಗ ಹೊರಡಬೇಕೆಂದು ಆಜ್ಞೆ ಮಾಡು.