institutional ಇನ್‍ಸ್ಟಿಟ್ಯೂಷನಲ್‍
ಗುಣವಾಚಕ
  1. (ಚರ್ಚುಗಳು, ಪೂಜಾರಿಗಳು, ವಿಧಿಸಂಸ್ಕಾರಗಳು, ಮೊದಲಾದವುಗಳ ವಿಷಯದಲ್ಲಿ ಮತ್ತು ಧರ್ಮದ ವಿಷಯದಲ್ಲಿ ಸಹ) ಸಂಸ್ಥಾರೂಪದ; ಸಾಂಸ್ಥಿಕ; ಸಾಂಘಿಕ; ಸಂಸ್ಥೆಯಾಗಿ ವ್ಯವಸ್ಥೆಗೊಂಡ; ಸಂಸ್ಥೆಯ ರೂಪ ಪಡೆದ.
  2. ಸಂಸ್ಥೆಯ; ಸಂಸ್ಥೆಗೆ ಸಂಬಂಧಪಟ್ಟ; ಸಂಸ್ಥೆಯಿಂದ ಸ್ಥಾಪಿಸಲ್ಪಟ್ಟ.
  3. ವ್ಯವಸ್ಥಿತ ಸಂಸ್ಥೆಗಳ.
  4. ಸಂಸ್ಥಾಭವನಗಳ; ವ್ಯವಸ್ಥಿತ ಸಂಸ್ಥೆಗಳ ಕಾರ್ಯಕ್ಕೆ ಈಸಲಾದ ಕಟ್ಟಡಗಳ.
  5. ಸಾಂಸ್ಥಿಕ; ಸಾಂಘಿಕ; ದೊಡ್ಡ ಸಂಸ್ಥೆಗಳಲ್ಲಿ ಕಂಡುಬರುವ ಏಕರೀತಿ ಮೊದಲಾದ ಲಕ್ಷಣದ: institutional food ಸಂಸ್ಥಾಲಕ್ಷಣದ ಏಕರೀತಿಯ ಆಹಾರ.
  6. (ಅಮೆರಿಕನ್‍ ಪ್ರಯೋಗ) (ಜಾಹೀರಾತಿನ ವಿಷಯದಲ್ಲಿ) (ಮಾರಾಟ ಉತ್ಪನ್ನವನ್ನು ಹೆಚ್ಚಿಸುವುದಕ್ಕಿಂತ) ಸಂಸ್ಥೆಯ ಪ್ರತಿಷ್ಠೆಯನ್ನು ಹೆಚ್ಚಿಸಲು ಉದ್ದೇಶಿಸಿದ.