institution ಇನ್‍ಸ್ಟಿಟ್ಯೂಷನ್‍
ನಾಮವಾಚಕ
  1. ಸ್ಥಾಪನೆ; ಪ್ರತಿಷ್ಠಾಪನೆ.
  2. (ವಿಚಾರಣೆ ಮೊದಲಾದವುಗಳ) ಆರಂಭ; ಹೂಡುವಿಕೆ.
  3. (ಚರ್ಚಿನ ಧರ್ಮವೃತ್ತಿಗೆ) ನೇಮಕ; ನೇಮಕಾತಿ; ನೇಮಿಸುವುದು.
  4. (ವ್ಯಕ್ತಿಗೆ) ಪಾದ್ರಿದೀಕ್ಷೆ ನೀಡಿಕೆ; ಶಿಷ್ಯರ ಆತ್ಮಗಳ ರಕ್ಷಣಾಕಾರ್ಯವನ್ನು (ಪಾದ್ರಿಗೆ) ವಹಿಸಿಕೊಡುವಿಕೆ.
  5. ಸ್ಥಾಪನೆಗೊಂಡ, ಸ್ಥಾಪಿತ – ನ್ಯಾಯ, ಪದ್ಧತಿ, ಸಂಪ್ರದಾಯ ಯಾ ಆಚಾರ: the institution of marriage ಮದುವೆಯ ಪದ್ಧತಿ.
  6. (ಆಡುಮಾತು) (ವ್ಯಕ್ತಿ ಮೊದಲಾದವರ ವಿಷಯದಲ್ಲಿ) ಪರಿಚಿತವಸ್ತು, ವ್ಯಕ್ತಿ; ಬಳಕೆಯ ರೂಢಿ, ಆಚಾರ; ಸರ್ವೇಸಾಮಾನ್ಯ: the postman was as much an institution in the town as the towerclock ಅಂಚೆಯವನು ಗೋಪುರದ ಗಡಿಯಾರದಷ್ಟೇ ಊರಿಗೆಲ್ಲಾ ಪರಿಚಿತ ವ್ಯಕ್ತಿಯಾಗಿದ್ದನು.
  7. (ಸಾರ್ವಜನಿಕ ಹಿತಕ್ಕಾಗಿ ಸ್ಥಾಪಿಸಿದ) ಪ್ರತಿಷ್ಠಾನ; ಸಂಸ್ಥೆ.
  8. ಸಂಸ್ಥೆಯ – ಕಟ್ಟಡ, ಭವನ, ಮಂದಿರ.