See also 2institute
1institute ಇನ್‍ಸ್ಟಿಟ್ಯುಟ್‍
ನಾಮವಾಚಕ
  1. (ವೈಜ್ಞಾನಿಕ ಯಾ ಇತರ ಉದ್ದೇಶಕ್ಕಾಗಿ ಏರ್ಪಟ್ಟ) ಸಂಘ; ಸಂಸ್ಥೆ; ಪೀಠ; ಸಮಾಜ.
  2. ಸಂಘಮಂದಿರ; ಸಂಘದ, ಸಂಸ್ಥೆಯ – ಕಟ್ಟಡ.
  3. (ಬಹುವಚನದಲ್ಲಿ) (ಯಾವುದೇ ವಿಷಯದ, ಮುಖ್ಯವಾಗಿ ನ್ಯಾಯಶಾಸ್ತ್ರದ) ಸೂತ್ರಸಂಹಿತೆ; ಮೂಲತತ್ತ್ವಗಳ ಸಂಗ್ರಹ: Institutes of Justinian (ರೋಮನ್‍ ಚಕ್ರವರ್ತಿ) ಜಸ್ಟಿನಿಯನ್‍ ಸಂಹಿತೆ; ಜಸ್ಟಿನಿಯನ್‍ ಚಕ್ರವರ್ತಿಯ ಆಜ್ಞೆಯ ಪ್ರಕಾರ ರಚಿಸಿದ ರೋಮನ್‍ ಕಾನೂನಿನ ಮೂಲತತ್ತ್ವಗಳ ಸಂಗ್ರಹ, ಸಂಕಲನ.
  4. ಬೋಧನೆಯ, ಶಿಕ್ಷಣದ – ಮೂಲಸೂತ್ರ, ಮೂಲತತ್ತ್ವ.
  5. (ಅಮೆರಿಕನ್‍ ಪ್ರಯೋಗ) (ಉಪಾಧ್ಯಾಯರು ಮೊದಲಾದವರಿಗೆ ಏರ್ಪಡಿಸುವ) ಅಲ್ಪಾವಧಿ ತರಪೇತಿ; ಅಲ್ಪಕಾಲಿಕ ತರಬೇತು.
See also 1institute
2institute ಇನ್‍ಸ್ಟಿಟ್ಯೂಟ್‍
ಸಕರ್ಮಕ ಕ್ರಿಯಾಪದ
  1. ಸ್ಥಾಪಿಸು; ಪ್ರತಿಷ್ಠಾಪಿಸು.
  2. ವ್ಯವಸ್ಥಾಪಿಸು; ಏರ್ಪಡಿಸು: the artists have instituted an exhibition of paintings ಕಲಾವಿದರು ವರ್ಣಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಿದ್ದಾರೆ.
  3. (ವಿಚಾರಣೆ ಮೊದಲಾದವನ್ನು) ಆರಂಭಿಸು; ಹೂಡು: institute legal proccedings ಕಾನೂನುಕ್ರಮಗಳನ್ನು ಹೂಡು.
  4. (ಚರ್ಚಿನ ಧರ್ಮವೃತ್ತಿಗೆ) ನೇಮಿಸು; ನಿಯೋಜಿಸು.