See also 2instinct
1instinct ಇನ್‍ಸ್ಟಿಂಕ್ಟ್‍
ನಾಮವಾಚಕ
  1. (ಮುಖ್ಯವಾಗಿ ಕೀಳು ಪ್ರಾಣಿಗಳಲ್ಲಿ ಕಂಡುಬರುವ, ಬುದ್ಧಿಪೂರ್ವಕವಾಗಿಯೋ ಎಂಬಂತೆ ಕೆಲವು ಕಾರ್ಯಗಳನ್ನು ಮಾಡುವ) ಸಹಜ – ಪ್ರವೃತ್ತಿ, ಸ್ವಭಾವ; ಪ್ರಕೃತಿ: birds learn to fly by instinct ಹಕ್ಕಿಗಳು ಸಹಜ ಪ್ರವೃತ್ತಿಯಿಂದ ಹಾರಲು ಕಲಿಯುತ್ತವೆ.
  2. ಹುಟ್ಟುಗುಣ; ಸ್ವಭಾವ; ಪ್ರಕೃತಿ; ಮೂಲಪ್ರವೃತ್ತಿ: he was by instinct a lawgiver ಅವನು ಹುಟ್ಟುಗುಣದಿಂದಲೇ ನ್ಯಾಯನಿಬಂಧನೆಗಳನ್ನು ರಚಿಸಬಲ್ಲವನಾಗಿದ್ದನು.
  3. ಸಹಜ ಒಲವು; ಹುಟ್ಟರಿವು; ಮೂಲಪ್ರವೃತ್ತಿ; ತಾನೇ ತಾನಾಗಿ ಬಂದ ಕೌಶಲ; ಕಲಿಯದೆ ಬಂದ ಸಹಜ ಜಾಣ್ಮೆ, ಸಾಮರ್ಥ್ಯ, ಅರಿವು: an instinct for art ಕಲೆಯಲ್ಲಿ ಸಹಜ ಒಲವು.
See also 1instinct
2instinct ಇನ್‍ಸ್ಟಿಂಕ್ಟ್‍
ಆಖ್ಯಾತಕ ಗುಣವಾಚಕ

(ಜೀವ ಚೆಲುವು, ಬಲ, ಮೊದಲಾದವುಗಳಿಂದ) ತುಂಬಿದ; ವ್ಯಾಪ್ತವಾದ; ಚೇತನಗೊಂಡ: a picture instinct with life ಜೀವದಿಂದ ತುಂಬಿದ ಚಿತ್ರ.