instil ಇನ್‍ಸ್ಟಿಲ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ instilling, ಭೂತರೂಪ ಮತ್ತು ಭೂತಕೃದಂತ instilled).
  1. (ವಸ್ತುವಿನಲ್ಲಿ ದ್ರವವನ್ನು) ತೊಟ್ಟಿಕ್ಕಿಸು; ಹನಿಸು; ಹನಿಹನಿಯಾಗಿ ಹಾಕು.
  2. (ಭಾವನೆ, ಭಾವಗಳು, ಮೊದಲಾದವನ್ನು ವ್ಯಕ್ತಿ, ಮನಸ್ಸು, ಮೊದಲಾದವುಗಳಲ್ಲಿ) ಕ್ರಮ ಕ್ರಮವಾಗಿ – ಊರಿಸು, ತುಂಬು; ನಿಧಾನವಾಗಿ ಎರೆ: instilling a reverence for honest dealings ಪ್ರಾಮಾಣಿಕ ವ್ಯವಹಾರಗಳ ಬಗ್ಗೆ ಗೌರವವನ್ನು ಕ್ರಮೇಣ ತುಂಬುವುದು.