instigate ಇನ್‍ಸ್ಟಿಗೇಟ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಯನ್ನು ಕಾರ್ಯಕ್ಕೆ, ಸಾಮಾನ್ಯವಾಗಿ ಕೆಡಕುಮಾಡಲು) ಪ್ರೇರೇಪಿಸು; ಪ್ರಚೋದಿಸು; ಚಿತಾಯಿಸು; ಎತ್ತಿಕಟ್ಟು; ಚುಚ್ಚಿಕೊಡು: instigate people to war upon one another ಪರಸ್ಪರ ಕಾದಾಡುವಂತೆ ಜನರನ್ನು ಚಿತಾಯಿಸು.
  2. (ದಂಗೆ, ಖೂನಿ, ಮೊದಲಾದವಕ್ಕೆ) ಚಿತಾವಣೆ ಮಾಡು; ಪುಸಲಾಯಿಸು; ಪ್ರೇರಣೆ ಮಾಡಿ ನಡೆಯುವಂತೆ ಮಾಡು: instigate a strike ಮುಷ್ಕರವಾಗುವಂತೆ ಚಿತಾವಣೆ ಮಾಡು.