See also 2instant
1instant ಇನ್‍ಸ್ಟಂಟ್‍
ಗುಣವಾಚಕ
  1. ತುರ್ತಾದ; ಜರೂರಿನ; ತ್ವರೆಯ; ಅವಸರದ: in instant need of help ಸಹಾಯದ ತುರ್ತು ಅಗತ್ಯದಲ್ಲಿ.
  2. (ಆಹಾರದ ವಿಷಯದಲ್ಲಿ) ದಿಢೀರ್‍; (ಹೆಚ್ಚಿನ ಸಿದ್ಧತೆ ಬೇಕಿಲ್ಲದೆ) ತಕ್ಷಣ ಸಿದ್ಧವಾಗುವ.
  3. ತತ್‍ಕ್ಷಣದ; ದಿಢೀರ್‍; ಥಟ್ಟನೆಯ; ಈಗಲೇ ಒಡನೆಯೇ, ಕೂಡಲೇ – ಆಗಬೇಕಾದ: want instant relief ತತ್‍ಕ್ಷಣದ ಪರಿಹಾರ ಬೇಕು.
  4. (ವಾಣಿಜ್ಯ) (ಸಂಕ್ಷಿಪ್ತ inst.) ಹಾಲಿ ತಿಂಗಳಿನ; ನಡೆಯುತ್ತಿರುವ, ಚಾಲ್ತಿ – ತಿಂಗಳಿನ; ವರ್ತಮಾನ ಮಾಸದ: the 6th instant ಈ ತಿಂಗಳ 6ನೆಯ ತಾರೀಖು.
  5. (ಪ್ರಾಚೀನ ಪ್ರಯೋಗ) ಈ ಕ್ಷಣದ; ಸದ್ಯದ; ಈಗಿನ.
See also 1instant
2instant ಇನ್‍ಸ್ಟಂಟ್‍
ನಾಮವಾಚಕ
  1. (ಮುಖ್ಯವಾಗಿ ವರ್ತಮಾನದ) ಕ್ಷಣ; ಗಳಿಗೆ: come here this instant ಈ ಕ್ಷಣ ಬಾ. I went that instant, I went on the instant ನಾನು ಆ ಕ್ಷಣವೇ ಹೊರಟೆ. told you the instant I knew ನನಗೆ ಗೊತ್ತಾದ ಕ್ಷಣವೇ ನಿನಗೆ ಹೇಳಿದೆ.
  2. ಕ್ಷಣ; ಅತ್ಯಲ್ಪಕಾಲ: I shall be back in an instant ಒಂದು ಕ್ಷಣದಲ್ಲಿ ವಾಪಸು ಬರುವೆನು.
ಪದಗುಚ್ಛ

instant reply ತತ್‍ಕ್ಷಣದ ರೀಪ್ಲೇ; ನಡೆಯುತ್ತಿರುವ ಕ್ರಿಕೆಟ್‍, ಮೊದಲಾದ ಯಾವುದೇ ಆಟದ ರೆಕಾರ್ಡ್‍ ಮಾಡಿದ ಭಾಗವನ್ನು, ಮುಖ್ಯವಾಗಿ ನಿಧಾನಗತಿಯಲ್ಲಿ, ಕೂಡಲೇ ವೀಕ್ಷಕರಿಗೆ ಮತ್ತೆ ಹಾಕಿ ತೋರಿಸುವುದು; ತತ್‍ಕ್ಷಣದ ಪುನರಾಟ.