See also 2instance
1instance ಇನ್‍ಸ್ಟನ್ಸ್‍
ನಾಮವಾಚಕ
  1. ಉದಾಹರಣೆ; ಷ್ಟಾಂತ; ನಿದರ್ಶನ: just another instance of his lack of determination ಅವನಿಗೆ ನಿರ್ಧಾರ ಕೈಗೊಳ್ಳುವ ಶಕ್ತಿಯಿಲ್ಲವೆಂಬುದಕ್ಕೆ ಇನ್ನೊಂದು ಉದಾಹರಣೆ.
  2. ನಿರ್ದಿಷ್ಟ – ಸಂದರ್ಭ, ಪ್ರಸಂಗ, ವಿಷಯ: that’s not true in this instance ಈ ಪ್ರಸಂಗದಲ್ಲಿ ಅದು ನಿಜವಲ್ಲ.
  3. (ನ್ಯಾಯಶಾಸ್ತ್ರ) ವ್ಯವಹಾರ; ದಾವೆ.
ಪದಗುಚ್ಛ
  1. at the instance of ( – ರ) ಕೋರಿಕೆಯ ಪ್ರಕಾರ; ಪ್ರಾರ್ಥನೆಯಂತೆ; ವಿನಂತಿಯ ಮೇರೆಗೆ; ಸೂಚನೆಯಂತೆ: he applied for the job at the instance of his professor ತನ್ನ ಪ್ರಾಧ್ಯಾಪಕರ ಸೂಚನೆಯ ಮೇರೆಗೆ ಅವನು ಕೆಲಸಕ್ಕೆ ಅರ್ಜಿ ಹಾಕಿದನು.
  2. court of first instance ಆರಂಭ ವಿಚಾರಣೆಯ ನ್ಯಾಯಸ್ಥಾನ.
  3. for instance ಉದಾಹರಣೆಗೆ; ಷ್ಟಾಂತವಾಗಿ.
  4. in the first instance
    1. ಮೊದಲನೆಯದಾಗಿ; ಪ್ರಥಮತಃ.
    2. ವ್ಯವಹಾರದ ಯಾ ಕಾರ್ಯಕ್ರಮದ ಮೊದಲನೆಯ ಹಂತದಲ್ಲಿ.
See also 1instance
2instance ಇನ್‍ಸ್ಟನ್ಸ್‍
ಸಕರ್ಮಕ ಕ್ರಿಯಾಪದ
  1. (ವಾಸ್ತವಾಂಶವನ್ನು, ಸಂದರ್ಭವನ್ನು) ಉದಾಹರಿಸು; ನಿದರ್ಶನವಾಗಿ ಕೊಡು; ಷ್ಟಾಂತವಾಗಿ ಹೇಳು: we might instance the increase in prices ನಾವು ಬೆಲೆ ಏರಿಕೆಯನ್ನು ನಿದರ್ಶನವಾಗಿ ಕೊಡಬಹುದು.
  2. (ಸಾಮಾನ್ಯವಾಗಿ ಕರ್ಮಣಿಪ್ರಯೋಗದಲ್ಲಿ) ನಿದರ್ಶಿಸು; ದೃಷ್ಟಾಂತವಾಗಿರು; ಉದಾಹರಣೆಯಾಗಿರು: his meaning is well instanced in this passage ಈ ವಾಕ್ಯಗಳಲ್ಲಿ ಅವನ ಅಭಿಪ್ರಾಯ ಚೆನ್ನಾಗಿ ನಿದರ್ಶಿತವಾಗಿದೆ.