install ಇನ್‍ಸ್ಟಾಲ್‍
ಸಕರ್ಮಕ ಕ್ರಿಯಾಪದ
  1. ಪಟ್ಟಕಟ್ಟು; (ವ್ಯಕ್ತಿಯನ್ನು ಅಧಿಕಾರದಲ್ಲಿ ಯಾ ಪದವಿಯಲ್ಲಿ) ವಿಧಿವತ್ತಾಗಿ – ಕುಳ್ಳಿರಿಸು, ಪ್ರತಿಷ್ಠಾಪಿಸು: installed the new president ಹೊಸ ಅಧ್ಯಕ್ಷನನ್ನು ಅಧಿಕಾರದಲ್ಲಿ ಪ್ರತಿಷ್ಠಾಪಿಸಿದರು.
  2. (ವ್ಯಕ್ತಿಯನ್ನು, ತನ್ನನ್ನು – ಸ್ಥಾನ, ಸ್ಥಿತಿ, ಮೊದಲಾದವಲ್ಲಿ) ಸ್ಥಾಪಿಸು; ಸ್ಥಾಪನೆಮಾಡು; ನೆಲೆಗೊಳಿಸು; ಪ್ರತಿಷ್ಠಾಪಿಸು; ಕೂರಿಸು; ನಿಲ್ಲಿಸು: install oneself in new quarters ಹೊಸ ನಿವಾಸದಲ್ಲಿ ತನ್ನನ್ನು ಸ್ಥಾಪಿಸಿಕೊ.
  3. (ಯಂತ್ರ, ಸಲಕರಣೆ, ಮೊದಲಾದವನ್ನು) ಅಳವಡಿಸು; ಸ್ಥಾಪಿಸು; ಇರಿಸು; ಜೋಡಿಸು; ಉಪಯೋಗಕ್ಕೆ ಬರುವಂತೆ ಅನುಗೊಳಿಸು.