inspired ಇನ್‍ಸ್ಪೈಅರ್ಡ್‍
ಗುಣವಾಚಕ
  1. (ಒಂದು ಕಲಾತಿಯ ವಿಷಯದಲ್ಲಿ) ಸ್ಫೂರ್ತ; ಸ್ಫೂರ್ತಿಗೊಂಡ; ಅತಿಮಾನುಷ ಮೂಲದಿಂದ ಬಂದಂತಿರುವ ಯಾ ಪ್ರೇರಿತವಾದಂತಿರುವ; ಸ್ಫೂರ್ತಿಯಿಂದ ಕೂಡಿದ: an inspired speech ಸ್ಫೂರ್ತಿಯಿಂದ ಕೂಡಿದ ಭಾಷಣ.
  2. (ಊಹೆಯ ವಿಷಯದಲ್ಲಿ) ಸ್ಫೂರ್ತ; ಅಂತರ್ಬೋಧಿತ; ಅಂತರ್ಬೋಧೆಯಿಂದ ಬಂದ, ಆದರೆ ಸರಿಯಾದ.
  3. ಗುಪ್ತವಾಗಿ ಸೂಚಿತವಾದ ಯಾ ಪ್ರಭಾವಿ ವ್ಯಕ್ತಿ ಮೊದಲಾದವರಿಂದ ಮೂಡಿದ: an inspired article (ವರ್ತಮಾನ ಪತ್ರಿಕೆಯಲ್ಲಿ) ಪ್ರೇರಿತ ಲೇಖನ; ಪ್ರಭಾವಶಾಲಿ ವ್ಯಕ್ತಿ ಮೊದಲಾದವರಿಂದ ರಹಸ್ಯವಾಗಿ ಸೂಚಿತವಾದ ಯಾ ಪ್ರೇರಣೆಗೊಂಡ ಲೇಖನ.