inspire ಇನ್‍ಸ್ಪೈಅರ್‍
ಸಕರ್ಮಕ ಕ್ರಿಯಾಪದ
  1. (ಗಾಳಿ ಮೊದಲಾದವನ್ನು) ಒಳಕ್ಕೆ ಸೇದಿಕೊ; ಉಸಿರೆಳೆದುಕೊ; ಉಚ್ಛ್ವಸಿಸು ( ಅಕರ್ಮಕ ಕ್ರಿಯಾಪದ ಸಹ).
  2. (ಮುಖ್ಯವಾಗಿ ದೈವಿಕ ಯಾ ಅತಿಮಾನುಷ ಶಕ್ತಿಯ ವಿಷಯದಲ್ಲಿ, ವ್ಯಕ್ತಿಯಲ್ಲಿ ) ಸ್ಫೂರ್ತಿ ತುಂಬು; ಆಲೋಚನೆ ಯಾ ಭಾವವನ್ನು ತುಂಬು; ಪ್ರೇರಿಸು: spoke like a prophet inspired from above ದೇವರಿಂದ ಸ್ಫೂರ್ತಿಗೊಂಡ ಪ್ರವಾದಿಯಂತೆ ಮಾತನಾಡಿದನು.
  3. (ವ್ಯಕ್ತಿ ಮೊದಲಾದವರನ್ನು, ಭಾವನೆಯಿಂದ) ಚೇತನಗೊಳಿಸು; ಉತ್ತೇಜಿಸು; ಹುರಿದುಂಬಿಸು: inspire with courage ಧೈರ್ಯದಿಂದ ಉತ್ತೇಜಿಸು.
  4. (ವ್ಯಕ್ತಿ ಮೊದಲಾದವರಲ್ಲಿ ಭಾವನೆಯನ್ನು) ತುಂಬು; ಎರೆ.
  5. (ವ್ಯಕ್ತಿಯಲ್ಲಿ ಭಾವನೆಯನ್ನು) ಮೂಡಿಸು; ಉಂಟುಮಾಡು.