inspiration ಇನ್‍ಸ್ಪಿರೇಷನ್‍
ನಾಮವಾಚಕ
  1. ಉಸಿರೆಳೆತ; ಉಚ್ಛ್ವಸನ.
  2. (ರೂಪಕವಾಗಿ) ಸ್ಫೂರ್ತಿ ನೀಡುವುದು; ಪ್ರೇರಣೆ ಕೊಡುವಿಕೆ.
  3. (ಮುಖ್ಯವಾಗಿ ಕವಿಗಳು ಮೊದಲಾದವರನ್ನು ಪ್ರೇರಿಸುವುದೆಂದು, ಬೈಬಲ್‍ ಮೊದಲಾದ ಧರ್ಮಗ್ರಂಥಗಳನ್ನು ಬರೆದವರು ಹೊಂದಿದ್ದರೆಂದು ನಂಬಿರುವ) ದೈವ ಪ್ರೇರಣೆ; ದೈವೀಚೋದನೆ; ದಿವ್ಯಸ್ಫೂರ್ತಿ: verbal inspiration ಶಾಬ್ದಿಕ ಪ್ರೇರಣೆ; ಪ್ರತಿ ಶಬ್ದವನ್ನೂ ಹೇಳಿ ಬರೆಸಿದ ದೈವ ಪ್ರೇರಣೆ. plenary inspiration ಸರ್ವ ವಿಷಯಕ ಪ್ರೇರಣೆ; ಎಲ್ಲ ವಿಷಯಗಳನ್ನೂ ಒಳಗೊಂಡ ಸ್ಫೂರ್ತಿ. moral inspiration ನೈತಿಕ ಮತ್ತು ಧಾರ್ಮಿಕ ಪ್ರೇರಣೆ; ನೈತಿಕ ಮತ್ತು ಧಾರ್ಮಿಕ ಉಪದೇಶಗಳಿಗೆ ಸೀಮಿತವಾದ ದೈವ ಪ್ರೇರಣೆ.
  4. ಸ್ಫೂರ್ತಿಗೊಂಡ ಆಲೋಚನೆ ಮೊದಲಾದವು; ಪ್ರೇರಣೆಯಿಂದ ಹೊಮ್ಮಿದ ಭಾವನೆ, ಕಾರ್ಯ, ಮೊದಲಾದವು.
  5. ಸ್ಫೂರ್ತಿ; ಚೋದನೆ; ಪ್ರೇರಣೆ.
  6. ಥಟ್ಟನೆ ಹೊಳೆದ ಸೊಗಸಾದ ಭಾವ; ಸ್ಫೂರ್ತಿಯಿಂದ ಹೊಮ್ಮಿದ ಭಾಗ: a scheme that is a pure inspiration ಪೂರ್ಣವಾಗಿ ಸ್ಫೂರ್ತಿಯಿಂದ ಹೊಮ್ಮಿದ ಯೋಜನೆ.
  7. ಸ್ಫೂರ್ತಿದಾಯಕ ತತ್ತ್ವ: charity which has Chirst for its model and inspiration ಕ್ರಿಸ್ತನನ್ನು ಮಾದರಿ ಮತ್ತು ಸ್ಫೂರ್ತಿ ನೀಡುವ ತತ್ತ್ವವಾಗುಳ್ಳ ದಯೆ.