inspan ಇನ್‍ಸ್ಪಾನ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ inspanned, ವರ್ತಮಾನ ಕೃದಂತ inspanning).

(ದಕ್ಷಿಣ ಆಹಿಕದ ಪ್ರಯೋಗ)

  1. (ಎತ್ತುಗಳು ಮೊದಲಾದವನ್ನು) ಜೋಡಿಯಾಗಿ ನೊಗ ಕಟ್ಟು, ನೊಗ ಹೂಡು (ಕರ್ಮಪದರಹಿತವಾಗಿ ಸಹ ಪ್ರಯೋಗ).
  2. (ಬಂಡಿಯನ್ನು) ಸಜ್ಜುಗೊಳಿಸು; ಸಜ್ಜು ಮಾಡು; (ಬಂಡಿಗೆ) ಎತ್ತು ಮೊದಲಾದವನ್ನು ಕಟ್ಟು.
  3. (ಜನರನ್ನು ಯಾ ಸಂಪನ್ಮೂಲವನ್ನು) ಸೇವೆಗೆ ಬಳಸಿಕೊ.