insinuation ಇನ್‍ಸಿನ್ಯುಏಷನ್‍
ನಾಮವಾಚಕ
  1. (ಮುಖ್ಯವಾಗಿ ಹೀನಯಿಸುವ ರೀತಿಯ) ಪರೋಕ್ಷ ಯಾ ರಹಸ್ಯ ಸೂಚನೆ: nasty insinuations about his rival ತನ್ನ ಪ್ರತಿಸ್ಪರ್ಧಿಯನ್ನು ಹೀನಯಿಸುವ ಪರೋಕ್ಷ ಸೂಚನೆಗಳು.
  2. ರಹಸ್ಯವಾದ ಯಾ ಕುಯುಕ್ತಿಯ ಸೂಚನೆ, ಸುಳಿವು: his methods of insinuation are ingenious ಅವನ ಕುಯುಕ್ತಿಯ ಸೂಚನಾರೀತಿಗಳು ಚತುರವಾದವು.
  3. (ಸೂಕ್ಷ್ಮವಾಗಿ ಯಾ ಕುಯುಕ್ತಿಯಿಂದ) ಮನಸ್ಸನ್ನು ತುಂಬುವುದು.
  4. (ವ್ಯಕ್ತಿಯ ಪ್ರೀತಿ, ವಿಶ್ವಾಸ, ಅನುಗ್ರಹ ಸಂಪಾದನೆಗೆ) ಅನುನಯ; ಹೊಸೆದುಕೊಂಡು ಹೋಗುವಿಕೆ; ಮರ್ಜಿಹಿಡಿಯುವಿಕೆ; ಪುಸಲಾವಣೆ; ಅನುಗ್ರಹ ಸಂಪಾದನೆ: he made his way by flattery and insinuation ಹೊಗಳಿಕೆ ಪುಸಲಾವಣೆಗಳ ಮೂಲಕ ಅವನು ಮುಂದೆಬಂದ.
  5. (ಪ್ರಾಚೀನ ಪ್ರಯೋಗ) ಕದ್ದುಬರುವುದು; ನುಸುಳಿಕೆ; ನುಸುಳುವುದು; ನುಸುಳಿಕೊಂಡು ಬರುವಿಕೆ; ನಿಧಾನವಾಗಿ ಬಳಸಿಕೊಂಡು ಬರುವಿಕೆ.