insinuate ಇನ್‍ಸಿನ್ಯುಏಟ್‍
ಸಕರ್ಮಕ ಕ್ರಿಯಾಪದ
  1. (ವಸ್ತುವನ್ನು ಯಾ ತನ್ನನ್ನು ಕ್ರಮೇಣ ಯಾ ಉಪಾಯವಾಗಿ) ಹೊಗಿಸು; ಸೇರಿಸು; ನುಸುಳಿಸು.
  2. (ತನ್ನನ್ನು, ವ್ಯಕ್ತಿಯನ್ನು, ಅನುಗ್ರಹ, ಅಧಿಕಾರ, ಸ್ಥಾನ, ಮೊದಲಾದವಕ್ಕೆ) ಸೇರಿಸು; ನುಸುಳಿಸು; ಹೊಸೆದುಕೊಂಡು ಹೋಗು: insinuating himself into the confidence of villagers ಹಳ್ಳಿಗರ ವಿಶ್ವಾಸಕ್ಕೆ ತನ್ನನ್ನು ನುಸುಳಿಸಿಕೊಂಡು.
  3. (ಭಾವನೆಯನ್ನು) ಪರೋಕ್ಷವಾಗಿ ತಿಳಿಸು; ವ್ಯಂಜನೆಯಿಂದ ಸೂಚಿಸು: he insinuated that she was lying ಅವಳು ಸುಳ್ಳು ಹೇಳುತ್ತಿದ್ದಾಳೆಂದು ಅವನು ಪರೋಕ್ಷವಾಗಿ ಸೂಚಿಸಿದನು.