See also 2inside  3inside  4inside
1inside ಇನ್‍ಸೈಡ್‍
ನಾಮವಾಚಕ
  1. ಒಳಗಡೆ; ಒಳಪಕ್ಕ; ಅಂತಃಪಾರ್ಶ್ವ; ಒಳಮೈ; ಒಳಮಗ್ಗುಲು.
  2. (ಕಾಲುದಾರಿಯ ವಿಷಯದಲ್ಲಿ) ಗೋಡೆಯ ಮಗ್ಗುಲಿನ ಯಾ ರಸ್ತೆಗೆ ದೂರವಿರುವ ಭಾಗ.
  3. ಒಳಗು; ಒಳಭಾಗ; ಒಳಪ್ರದೇಶ; ಅಂತಃಪ್ರದೇಶ; ಒಳಚಲು: the inside of the house ಮನೆಯ ಒಳಭಾಗ; ಗೃಹಾಂತ.
  4. (ಆಡುಮಾತು) (ಸಾಮಾನ್ಯವಾಗಿ ಬಹುವಚನದಲ್ಲಿ) ಹೊಟ್ಟೆ ಮತ್ತು ಕರುಳು: something wrong with my insides ನನ್ನ ಹೊಟ್ಟೆ ಮತ್ತು ಕರುಳುಗಳಲ್ಲಿ ಏನೋ ದೋಷವಿದೆ.
  5. (ಆಡುಮಾತು) ಒಳಹುದ್ದೆ; ಒಳಗುಟ್ಟನ್ನು, ಒಳಗಿನ ವಿಷಯವನ್ನು ತಿಳಿದುಕೊಳ್ಳಲು ಅವಕಾಶವಿರುವ ಹುದ್ದೆ, ಸ್ಥಾನ: knows someone on the inside ಒಳಗುಟ್ಟನ್ನು ತಿಳಿಯಬಲ್ಲ ಹುದ್ದೆಯಲ್ಲಿರುವವನ ಪರಿಚಯವಿದೆ.
  6. (ಚರಿತ್ರೆ) (ಮಜಲುಬಂಡಿ ಮೊದಲಾದವುಗಳಲ್ಲಿ) ಒಳಗೆ ಕುಳಿತಿರುವ ಪ್ರಯಾಣಿಕ.
ನುಡಿಗಟ್ಟು
  1. know a thing inside out ಒಂದರ ಒಳಹೊರಗೆಲ್ಲ, ಬಹಿರಂತರವೆಲ್ಲ, ಅಂತರಂಗವೆಲ್ಲ ಸಂಪೂರ್ಣವಾಗಿ – ತಿಳಿದಿರು: he knew his business inside out ಅವನಿಗೆ ತನ್ನ ವ್ಯವಹಾರದ ಒಳಹೊರಗೆಲ್ಲ ಗೊತ್ತಿತ್ತು.
  2. the inside of a week etc. (ಬ್ರಿಟಿಷ್‍ ಪ್ರಯೋಗ) ವಾರ ಮೊದಲಾದವುಗಳ ಮಧ್ಯಭಾಗ, ನಡುಗಾಲ.
  3. turn inside out
    1. ಒಳಗಿನದನ್ನು ಹೊರಗೆ ಮಾಡು; ಪೂರ್ತಿ ಒಳ ಹೊರಗುಮಾಡು, ತಿರುಗುಮುರುಗುಮಾಡು.
    2. (ಆಡುಮಾತು) ತುಂಬ ಗೊಜಬಿಜಿ ಮಾಡು; ಗೊಂದಲಗೊಳಿಸು; ಅಸ್ತವ್ಯಸ್ತಗೊಳಿಸು; ಅವ್ಯವಸ್ಥೆ ಮಾಡು.
See also 1inside  3inside  4inside
2inside ಇನ್‍ಸೈಡ್‍
ಗುಣವಾಚಕ
  1. ಒಳಗಿನ; ಅಂತಃ; ಒಳಗಿರುವ; ಒಳಗಣ; ಅಂತರಂಗದ; ಆಂತರ್ಯದ.
  2. (ಕಾಲ್ಚೆಂಡು ಮತ್ತು ಹಾಕಿ) ಇನ್‍ಸೈಡ್‍; ಮೈದಾನದ ಮಧ್ಯದ ಹತ್ತಿರವಿರುವ.
See also 1inside  2inside  4inside
3inside ಇನ್‍ಸೈಡ್‍
ಕ್ರಿಯಾವಿಶೇಷಣ
  1. ಒಳಗೆ; ಅಂತಃ; ಒಳಗಡೆಯಲ್ಲಿ.
  2. (ಅಶಿಷ್ಟ) ಸೆರೆಮನೆಯಲ್ಲಿ; ಜೈಲಿನ ಒಳಗೆ.
ಪದಗುಚ್ಛ

inside of a week etc. (ಆಡುಮಾತು) ಒಂದು ವಾರ ಮೊದಲಾದವುಗಳ ಒಳಗಾಗಿ.

See also 1inside  2inside  3inside
4inside ಇನ್‍ಸೈಡ್‍
ಉಪಸರ್ಗ
  1. ಒಳಗಡೆ; ಒಳಪಕ್ಕದಲ್ಲಿ; ಒಳಮಗ್ಗುಲಿನಲ್ಲಿ.
  2. ಒಳಗೆ: inside an hour ಒಂದು ಘಂಟೆಯ ಒಳಗೆ.