See also 2inset
1inset ಇನ್‍ಸೆಟ್‍
ನಾಮವಾಚಕ
  1. ಒಳಸೇರಿಕೆ; ಅಂತರ್ವೇಶ; ಅಂತರ್ನಿವೇಶ; ಒಳಜೋಡಣೆ:
    1. ಹಾಳೆಯಲ್ಲಿ ಯಾ ಪುಸ್ತಕದಲ್ಲಿ ನಡುವೆ ಸೇರಿಸಿದ ಹೆಚ್ಚಿನ ಪುಟ(ಗಳು).
    2. ದೊಡ್ಡ ನಕ್ಷೆಯ ಎಲ್ಲೆಯೊಳಗೆ ಸೇರಿಸಿದ ಸಣ್ಣ ನಕ್ಷೆ ಮೊದಲಾದವು.
  2. ಉಡುಪು ತುಂಡು; ಒಳತುಂಡು; ಉಡುಪಿನೊಳಕ್ಕೆ ಸೇರಿಸಿದ ತುಂಡು.
  3. (ನಡುವಂಗಿಯು ತೆರೆಯುವ ಭಾಗಕ್ಕೆ, ಅಂಚಾಗಿ ಬಳಸುವ ಬಿಳಿಯ) ಕಳಚುಪಟ್ಟಿಯ ಜೊತೆ.
See also 1inset
2inset ಇನ್‍ಸೆಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ inset ಯಾ insetted).
  1. ಒಳಸೇರಿಸು; ಅಂತರ್ವೇಶಿಸು; ಒಳಸೇರಿಕೆಯನ್ನು ಜೋಡಿಸು; ಹೆಚ್ಚಿನ ಪುಟಗಳನ್ನು, ಸಣ್ಣನಕ್ಷೆ, ಉಡುಪು ತುಂಡು, ಕಳಚು ಪಟ್ಟಿ, ಮೊದಲಾದವನ್ನು ಹಾಕು, ಸೇರಿಸು.
  2. ಒಳ ಸೇರಿಕೆಯಿಂದ ಅಲಂಕರಿಸು; ಒಳ ಸೇರಿಕೆ ಹಾಕಿ ಅಂದಗೊಳಿಸು.