insertion ಇನ್‍ಸರ್ಷನ್‍
ನಾಮವಾಚಕ
  1. ಒಳಸೇರಿಸಿಕೆ; ಒಳಜೋಡಿಸಿಕೆ; ತೂರಿಸಿಕೆ; ಅಂತರ್ಯೋಜನ; ಅಂತಃಕ್ಷೇಪ.
  2. (ಮುಖ್ಯವಾಗಿ ಲೇಖನದಲ್ಲಿ ಯಾ ಮುದ್ರಣದಲ್ಲಿ) ಸೇರಿಸಿದ್ದು; ಅಂತಃಕ್ಷಿಪ್ತ; ಸೇರಿಸಿದ ವಸ್ತು.
  3. (ವೃತ್ತಪತ್ರಿಕೆ ಮೊದಲಾದವಲ್ಲಿ) ಜಾಹಿರಾತಿನ (ಪ್ರತಿ ಸಲದ) ಪ್ರಕಟಣೆ.
  4. ಅಂತಃಕ್ಷಿಪ್ತ; ಅಲಂಕಾರವಿಲ್ಲದ ಸಾದಾ ವಸ್ತುವಿನಲ್ಲಿ ಸೇರಿಸಿದ ಅಲಂಕಾರ ಮೊದಲಾದವು: lace insertion ಜರತಾರಿ, ಲೇಸು – ಅಲಂಕಾರ.
  5. (ಅಂಗರಚನಾಶಾಸ್ತ್ರ) ಜೋಡಣೆ; ಸೇರ್ಪಡೆ; ಸ್ನಾಯು ಯಾ ಅಂಗ ಅಂಟಿಕೊಂಡಿರುವ ರೀತಿ.
  6. ನಿಕ್ಷೇಪಣೆ; ಗಗನನೌಕೆಯನ್ನು ಪಥದಲ್ಲಿ – ಸೇರಿಸುವುದು, ಇಡುವುದು, ನಿಕ್ಷೇಪಿಸುವುದು.