See also 2insert
1insert ಇನ್‍ಸರ್ಟ್‍
ಸಕರ್ಮಕ ಕ್ರಿಯಾಪದ
  1. ಒಳಹೊಗಿಸು; ಒಳತೂರಿಸು; ಒಳಸೇರಿಸು; ಅಂಚುಗಳ ನಡುವೆ ವಸ್ತುವನ್ನು ಮತ್ತೊಂದರಲ್ಲಿ ನುಗ್ಗಿಸು, ತುರುಕು: insert a key in lock ಬೀಗದಲ್ಲಿ ಕೀಲಿಯನ್ನು ತೂರಿಸು.
  2. (ಲೇಖನ, ವೃತ್ತಪತ್ರಿಕೆ, ಮೊದಲಾದವಲ್ಲಿ ಅಕ್ಷರ, ಪದ, ಲೇಖನವನ್ನು) ನಡುವೆ, ಮಧ್ಯೆ ಸೇರಿಸು: insert an advertisement in a newspaper ವೃತ್ತಪತ್ರಿಕೆಯಲ್ಲಿ ಜಾಹೀರಾತನ್ನು ಮಧ್ಯೆ ಸೇರಿಸು.
  3. (ಅಂಗರಚನಾಶಾಸ್ತ್ರ ಮೊದಲಾದವು) (ಭೂತಕೃದಂತದಲ್ಲಿ) (ಊತಕ ಮೊದಲಾದವುಗಳ ವಿಷಯದಲ್ಲಿ) ಒಂದು ನಿರ್ದಿಷ್ಟ, ಗೊತ್ತಾದ ಕಡೆ – ಸೇರಿಸಿದ, ಸಂಯೋಜಿತವಾದ, ಸಂಯೋಜನೆಗೊಳಿಸಿದ್ದ.
See also 1insert
2insert ಇನ್‍ಸರ್ಟ್‍
ನಾಮವಾಚಕ

ಅಂತಃಕ್ಷಿಪ್ತ; ಒಳಸೇರಿಕೆ; ಒಳಸೇರಿಸಿದ ಯಾ ಸೇರಿಸಬೇಕಾದ ಯಾವುದೇ ವಸ್ತು, ಉದಾಹರಣೆಗೆ ನಿಯತಕಾಲಿಕದಲ್ಲಿ ಸೇರಿಸಿದ ಬಿಡಿಹಾಳೆ, ಉಡುಪಿನಲ್ಲಿ ಸೇರಿಸಿ ಹೊಲಿದ ತುಂಡುಬಟ್ಟೆ, ಸಿನಿಮಾ ಹಿಲ್ಮ್‍ನಲ್ಲಿ ಸೇರಿಸಿದ ಚಿತ್ರ ಭಾಗ.