insensible ಇನ್‍ಸೆನ್ಸಿಬ್‍ಲ್‍
ಗುಣವಾಚಕ
  1. ಗೋಚರವಾಗದಷ್ಟು ಸೂಕ್ಷ್ಮವಾದ, ಕ್ರಮಕ್ರಮವಾದ; ದುರ್ಗ್ರಾಹ್ಯ; ಅತಿಸೂಕ್ಷ್ಮ: insensible motion ಗೋಚರವಾಗದಷ್ಟು ಸೂಕ್ಷ್ಮವಾದ ಚಲನೆ.
  2. ಅಲಕ್ಷಿತ; ಅಗ್ರಾಹ್ಯ; ಗಮನಕ್ಕೆ ಬರದ; ಗ್ರಾಹ್ಯವಲ್ಲದ; ಗಮನೀಯವಲ್ಲದ.
  3. ಪ್ರಜ್ಞೆಯಿಲ್ಲದ; ಎಚ್ಚರವಿಲ್ಲದ; ಮೂರ್ಛಿತ: he fell down and was long insensible ಅವನು ಕೆಳಕ್ಕೆ ಬಿದ್ದು ಬಹುಕಾಲ ಮೂರ್ಛಿತನಾಗಿದ್ದ.
  4. ಅರಿಯದ; ಅಜ್ಞ; ತಿಳಿದಿಲ್ಲದ; ಅನಭಿಜ್ಞ: insensible of their danger ತಮ್ಮ ಅಪಾಯದ ಬಗ್ಗೆ ಅರಿವಿಲ್ಲದೆ.
  5. ಭಾವಶೂನ್ಯ; ಕಲ್ಲೆದೆಯ; ನಿರ್ದಯ; ಕಠೋರ: he filled the most insensible with terror ಅವನು ಅತ್ಯಂತ ಕಲ್ಲೆದೆಯವರನ್ನೂ ತಲ್ಲಣಗೊಳಿಸಿದನು.