insensibility ಇನ್‍ಸೆನ್ಸಿಬಿಲಿಟಿ
ನಾಮವಾಚಕ
  1. ಸಂವೇದನ ಶೂನ್ಯತೆ; ಅಸಂವೇದನೆ; ಭಾವಹೀನತೆ; ಸಂವೇದನೆಯ ಶಕ್ತಿಯಿಲ್ಲದಿರುವುದು; ಗ್ರಹಣಶಕ್ತಿಯಿಲ್ಲದಿರುವುದು: insensibility to beauty ಸೌಂದರ್ಯಕ್ಕೆ ಅಸಂವೇದನೆ.
  2. ಉದಾಸೀನತೆ; ಔದಾಸೀನ್ಯ; ಅಸಡ್ಡೆ; ಅಲಕ್ಷ್ಯ; ಉಪೇಕ್ಷೆ: insensibility to the honour done to him ಅವನಿಗೆ ಸಲ್ಲಿಸಿದ ಗೌರವಕ್ಕೆ ತೋರಿದ ಉದಾಸೀನಭಾವ.
  3. ಮೂರ್ಛೆ; ಮೈಮರವು; ಪ್ರಜ್ಞೆಯಿಲ್ಲದಿರುವಿಕೆ: in a state of insensibility ಪ್ರಜ್ಞಾರಹಿತ ಸ್ಥಿತಿ.