inscribe ಇನ್‍ಸ್ಕೈಬ್‍
ಸಕರ್ಮಕ ಕ್ರಿಯಾಪದ
  1. (ಕಲ್ಲು, ಲೋಹ, ಕಾಗದ, ಮೊದಲಾದವುಗಳ ಮೇಲೆ ಮಾತುಗಳನ್ನು) ಬರೆ; ಕೆತ್ತು; ರೇಖಿಸು; ಲೇಖಿಸು.
  2. ವ್ಯಕ್ತಿಯ ಹೆಸರನ್ನು ಪಟ್ಟಿಯಲ್ಲಿ ಯಾ ಪುಸ್ತಕದಲ್ಲಿ – ಬರೆ, ನಮೂದಿಸು, ದಾಖಲು ಮಾಡು.
  3. (ಮುಖ್ಯವಾಗಿ ಅರ್ಪಿಸುವ ಪುಸ್ತಕದಲ್ಲಿ ವ್ಯಕ್ತಿಯ) ಹೆಸರು ಬರೆ.
  4. (ಬ್ರಿಟಿಷ್‍ ಪ್ರಯೋಗ) (ಮುಖ್ಯವಾಗಿ ಭೂತಕೃದಂತದಲ್ಲಿ) (ಹಿಡುವಳಿದಾರರ ಹೆಸರುಗಳನ್ನು ದಾಖಲು ಮಾಡಿಕೊಂಡು) ಷೇರುಗಳ ರೂಪದಲ್ಲಿ ಸಾಲಕೊಡು: inscribed stock (ಹೆಸರು ದಾಖಲು ಮಾಡಿಕೊಂಡಿರುವ) ಷೇರುಬಂಡವಾಳ ಪತ್ರ.
  5. (ಹಾಳೆ, ಫಲಕ, ಮೊದಲಾದವುಗಳ ಮೇಲೆ ಅಕ್ಷರಗಳಿಂದ) ಗುರುತಿಸು; ಬರೆ; ಮುದ್ರೆಯೊತ್ತು; ಕೆತ್ತು; ಅಂಕಿಸು.
  6. (ಜ್ಯಾಮಿತಿ) ಅಂತರ್ರಚಿಸು; ಒಳಗೆ ರಚಿಸು; ಒಳರಚಿಸು; ನಿರ್ದಿಷ್ಟ ಜ್ಯಾಮಿತೀಯ ಆಕೃತಿಯನ್ನು ಸಾಧ್ಯವಾದಷ್ಟು ಬಿಂದುಗಳಲ್ಲಿ ಸ್ಪರ್ಶಿಸುವಂತೆ, ಆದರೆ ಸಂಪೂರ್ಣವಾಗಿ ಅದರೊಳಗೆಯೇ ಇರುವಂತೆ, (ಒಂದು ಆಕೃತಿಯನ್ನು) ರಚಿಸು.