inquisitive ಇನ್‍ಕ್ವಿಸಿಟ್‍ವ್‍
ಗುಣವಾಚಕ
  1. ವಿಚಾರ ಮಾಡುವ; ಶೋಧನೆ ಮಾಡುವ; ಜಿಜ್ಞಾಸೆಯ; ಅನ್ವೇಷಣಶೀಲ; ತಿಳಿದುಕೊಳ್ಳುವ ಕುತೂಹಲವುಳ್ಳ; ಕುತೂಹಲ ಪ್ರಕೃತಿಯ; ಕೌತುಕಪ್ರಕೃತಿಯ:
    1. natural curiosity and inquisitive appetite ಸಹಜ ಕುತೂಹಲ ಮತ್ತು ಜಿಜ್ಞಾಸೆಯ ಒಲವು.
  2. (ಗುಟ್ಟು ತಿಳಿಯಲು) ಹೊಂಚಿ ನೋಡುವ; ಇಣುಕಿನೋಡುವ; ಬೆದಕುವ; ಪ್ರಶ್ನಿಸುವ; ವಿಚಾರಿಸುವ; ಅಧಿಕಪ್ರಸಂಗಿತನದ; (ಅಧಿಕಪ್ರಸಂಗಿತನದಿಂದ ಇತರರ ವಿಷಯಗಳಲ್ಲಿ) ಕುತೂಹಲ ತೋರುವ, ತಲೆ ಹಾಕುವ: the most inquisitive old fellow I have ever seen ನಾನು ಕಂಡವರಲ್ಲೆಲ್ಲಾ ಅತ್ಯಂತ ಅಧಿಕಪ್ರಸಂಗಿತನದ ಮುದಿಯ.