inquisition ಇನ್‍ಕ್ವಿಸಿಷನ್‍
ನಾಮವಾಚಕ
  1. ಹುಡುಕುವುದು; ಶೋಧ; ಶೋಧನೆ; ವಿಚಾರಣೆ; ತನಿಖೆ; ತಲಾಶು; ಅನ್ವೇಷಣೆ: it has escaped the inquisition of the curious ಅದು ಕುತೂಹಲಿಗಳ ಶೋಧವನ್ನು ತಪ್ಪಿಸಿಕೊಂಡಿದೆ.
  2. ನ್ಯಾಯಾಲಯದ ಯಾ ಅಧಿಕೃತ – ವಿಚಾರಣೆ, ತನಿಖೆ, ತಪಾಸಣೆ.
ಪದಗುಚ್ಛ

the Inquisition (ಚರಿತ್ರೆ) (ರೋಮನ್‍ ಕ್ಯಾಥೊಲಿಕ್‍) ಪಾಷಂಡಿ ನ್ಯಾಯಾಲಯ; ಪಾಷಂಡ ಮತವನ್ನು ಅಡಗಿಸಲು ನಿಯಮಿಸಿದ ಚರ್ಚಿನ ನ್ಯಾಯಸ್ಥಾನ.