inquire ಇನ್‍ಕ್ವೈಅರ್‍
ಸಕರ್ಮಕ ಕ್ರಿಯಾಪದ

(enquire ಎಂದೂ ಪ್ರಯೋಗ) (ವ್ಯಕ್ತಿಯ ಹೆಸರು, ಉದ್ಯೋಗ, ಮೊದಲಾದವನ್ನು) ಕೇಳು; ವಿಚಾರಿಸು; ಕೇಳಿ ತಿಳಿದುಕೊ: inquire a person’s name ವ್ಯಕ್ತಿಯ ಹೆಸರನ್ನು ಕೇಳು.

ಅಕರ್ಮಕ ಕ್ರಿಯಾಪದ
  1. (ಯಾವುದೇ ವಿಷಯದಲ್ಲಿ) ಶೋಧನೆ ಮಾಡು; ಅನ್ವೇಷಿಸು; ತಪಾಸಿಸು; ತಪಾಸಣೆ ನಡೆಸು; ಹುಡುಕು; ವಿಚಾರಣೆ ಮಾಡು; ತನಿಖೆ ನಡೆಸು; ವಿಚಾರಿಸು: inquire into the incident ಘಟನೆಯ ಬಗ್ಗೆ ತನಿಖೆ ನಡೆಸು.
  2. (ವ್ಯಕ್ತಿಯನ್ನು ಯಾವುದೇ ವಿಷಯ ಕುರಿತು) ವಿಚಾರಿಸು; ಕೇಳಿ ತಿಳಿದುಕೊ; ವಿಷಯ ಕೇಳು; ಮಾಹಿತಿ ಪಡೆ: inquire about horses ಕುದುರೆಗಳ ಬಗ್ಗೆ ಕೇಳಿ ತಿಳಿದುಕೊ.
  3. (ಅಂಗಡಿಯಲ್ಲಿ ಸಾಮಾನು ಮೊದಲಾದವುಗಳ ಬಗ್ಗೆ) ವಿಚಾರಿಸು; ಕೇಳು: inquire for a book in the shop ಅಂಗಡಿಯಲ್ಲಿ ಪುಸ್ತಕವಿದೆಯೇ ಎಂದು ವಿಚಾರಿಸು.
ಪದಗುಚ್ಛ

inquire after (or for) person ಅವನು ಹೇಗಿದ್ದಾನೆಂದು ವಿಚಾರಿಸು; ಅವನ ಯೋಗಕ್ಷೇಮ ಕೇಳು, ವಿಚಾರಿಸು.