inoculate ಇನಾಕ್ಯುಲೇಟ್‍
ಸಕರ್ಮಕ ಕ್ರಿಯಾಪದ
  1. (ಮನುಷ್ಯನಿಗೆ ಯಾ ಪ್ರಾಣಿಗೆ ಬಹು ಸೌಮ್ಯಸ್ಥಿತಿಯಲ್ಲಿ ರೋಗವನ್ನುಂಟು ಮಾಡಿ ಆ ರೋಗ ಬರದಂತೆ ರಕ್ಷಿಸುವ ಸಲುವಾಗಿ, ರೋಗದ ವಿಷವನ್ನು ಯಾ ಸೂಕ್ಷ್ಮ ರೋಗಾಣುಗಳನ್ನು) ರಕ್ತದ ಒಳಕ್ಕೆ – ಹೊಗಿಸು, ಚುಚ್ಚು; ರೋಗಾಣು ಚುಚ್ಚುಮದ್ದು ಹಾಕು; ಇನಾಕ್ಯುಲೇಟ್‍ ಮಾಡು: inoculate against cholera ಕಾಲರ ಬರದಿರುವ ಹಾಗೆ ಇನಾಕ್ಯುಲೇಷನ್‍ ಮಾಡು.
  2. (ವ್ಯಕ್ತಿ ಮೊದಲಾದವರಲ್ಲಿ ರೋಗ ಮೊದಲಾದವನ್ನು) ನೆಡು; ನಾಟು; (ಒಳಕ್ಕೆ) ಹೊಗಿಸು; ಬೇರೂರಿಸು; ಸ್ಥಾಪಿಸು.
  3. (ಮೊಳಕೆ, ಕುಡಿಗಳನ್ನು) ಗಿಡಕ್ಕೆ ಸೇರಿಸು, ಕಟ್ಟು; ಕಸಿಕಟ್ಟು; ಕಲಮು ಮಾಡು; ಅಂಟುಕಟ್ಟು; ಅಂಟಿಸು; ಅಂಟಿಕ್ಕು; ಕಣ್ಣುಹಾಕು: a dextrous hand inoculates a rose-tree bud upon an apple stock ಕುಶಲ ಕೈಯೊಂದು ಸೇಬುಕಾಂಡಕ್ಕೆ ಗುಲಾಬಿಗಿಡವನ್ನು ಕಸಿಕಟ್ಟುತ್ತದೆ.
  4. (ಯಾವುದೇ ಭಾವನೆಯನ್ನು) ಮನಹೊಗಿಸು; ಮನಸ್ಸಿನಲ್ಲಿ ಸೇರಿಸು; ಮನಸ್ಸಿಗೆ ನಾಟಿಸು; ಮನಸ್ಸಿಗೆ ತುಂಬು: inoculated them with their ideas of revolution ತಮ್ಮ ಕ್ರಾಂತಿವಿಚಾರಗಳನ್ನು ಅವರ ಮನಸ್ಸಿಗೆ ತುಂಬಿದರು.