See also 2innocent
1innocent ಇನಸಂಟ್‍
ಗುಣವಾಚಕ
  1. ಪಾಪರಹಿತ; ಪಾಪವರಿಯದ; ನಿಷ್ಕಳಂಕ; ಪರಿಶುದ್ಧ; ಪಾಪ ಯಾ ನೈತಿಕ ದೋಷವಿಲ್ಲದ: God made man innocent ಭಗವಂತ ಮಾನವನನ್ನು ಪಾಪರಹಿತನನ್ನಾಗಿ ಸೃಷ್ಟಿಸಿದನು.
  2. ದುರುದ್ದೇಶರಹಿತ; ಕೆಟ್ಟ ಉದ್ದೇಶದಿಂದ ಕೂಡಿರದ ಯಾ ಮಾಡಿರದ: innocent misrepresentation ದುರುದ್ದೇಶವಿಲ್ಲದ ತಪ್ಪುನಿರೂಪಣೆ.
  3. (ಅಪರಾಧ ಮೊದಲಾದವುಗಳ ವಿಷಯದಲ್ಲಿ) ತಪ್ಪುಮಾಡದ; ತಪ್ಪಿತಸ್ಥನಲ್ಲದ; ನಿರಪರಾಧಿಯಾದ: he was innocent of the crime ಅವನು ಅಪರಾಧವನ್ನು ಮಾಡಿರಲಿಲ್ಲ.
  4. (ಆಡುಮಾತು) ಇಲ್ಲದ; ರಹಿತ; ಹೊಂದಿರದ: windows innocent of glass ಗಾಜಿಲ್ಲದ ಕಿಟಕಿಗಳು.
  5. ಸರಳ; ಮೊದ್ದು; ನಿಷ್ಕಪಟ; ಅಮಾಯಕ; ಮುಗ್ಧ; ಕೃತ್ರಿಮವರಿಯದ: for all she looks innocent, she is no fool ಅವಳು ಎಷ್ಟೇ ಮೊದ್ದಾಗಿ ಕಂಡರೂ ಅವಳು ಮೂರ್ಖಳಲ್ಲ.
  6. ನಿರುಪದ್ರವಿ; ಕೆಡುಕು ಮಾಡದ; ತೊಂದರೆ ಮಾಡದ; ಹಾನಿತರದ; ಅಪಾಯಕರವಲ್ಲದ; ನಿರಪಾಯದ: innocent amusements ಕೆಡುಕುಮಾಡದ ವಿನೋದಗಳು.
  7. ನಿಷ್ಕಪಟಿಯಂತೆ ನಟಿಸುವ; ಮುಗ್ಧನಂತೆ ವರ್ತಿಸುವ.
See also 1innocent
2innocent ಇನಸಂಟ್‍
ನಾಮವಾಚಕ
  1. ಕಳಂಕರಹಿತ ಯಾ ನಿಷ್ಕಳಂಕ – ವ್ಯಕ್ತಿ (ಮುಖ್ಯವಾಗಿ ಎಳೆಯ ಮಗು).
  2. ಮುಗ್ಧ; ಅಮಾಯಕ; ಭೋಳೆ ವ್ಯಕ್ತಿ; ಸರಳ ಸ್ವಭಾವದವನು.
  3. ಮೂಢ; ತಿಳಿಗೇಡಿ; ಗಾಂಪ; ದಡ್ಡ; ಹೆಡ್ಡ.
  4. (ಬಹುವಚನದಲ್ಲಿ) ಮುಗ್ಧಶಿಶುಗಳು; ಅಮಾಯಕ ಮಕ್ಕಳು; ಏಸು ಹುಟ್ಟಿದ ಅನಂತರ, ಹೆರಡ್‍ ಎಂಬ ಕ್ರೂರ ರಾಜನು ಕೊಂದ ಕೂಸುಗಳು.
ಪದಗುಚ್ಛ

massacre (or slaughter) of the innocents (ಪಾರ್ಲಿಮೆಂಟಿನ ಅಶಿಷ್ಟ) ಕಾಯಿದೆಗಳ ಕೊಲೆ; (ಅಧಿವೇಶನದ ಅಂತ್ಯದಲ್ಲಿ ಕಾಲಾಭಾವದಿಂದ ಸಂಭವಿಸುವ) ಮಸೂದೆಗಳ ಪರಿತ್ಯಾಗ; ಕಾಯಿದೆಗಳನ್ನು ಕೈಬಿಡುವಿಕೆ.