innocence ಇನಸನ್ಸ್‍
ನಾಮವಾಚಕ
  1. ಪಾಪರಾಹಿತ್ಯ; ನಿಷ್ಕಳಂಕತೆ; ನೈತಿಕ ಪರಿಶುದ್ಧಿ.
  2. ನಿರಪರಾಧಿತನ; ನಿರ್ದೋಷತೆ.
  3. ಅಕೃತ್ರಿಮತೆ; ನಿಷ್ಕಪಟತೆ; ಮುಗ್ಧತೆ; ಋಜುತ್ವ; ಸರಳತೆ.
  4. (ವಸ್ತುಗಳ ವಿಷಯದಲ್ಲಿ) ನಿರಪಾಯತೆ; ಕೆಡಕು ಮಾಡದಿರುವಿಕೆ; ಹಾನಿಮಾಡದ ಗುಣ.
  5. ನಿಷ್ಕಳಂಕ, ಸರಳ, ಋಜು, ಅಕೃತ್ರಿಮ – ವ್ಯಕ್ತಿ ಯಾ ವಸ್ತು: take the jewels of this dead innocence ಸತ್ತುಹೋದ ಈ ನಿಷ್ಕಳಂಕ ವ್ಯಕ್ತಿಯ ಒಡವೆಗಳನ್ನು ತೆಗೆದುಕೊ.
  6. ಅಜ್ಞಾನ; ಮುಗ್ಧತೆ; ಪೆದ್ದುತನ; ತಿಳಿವಳಿಕೆಯಿಲ್ಲದಿರುವಿಕೆ; ಅರಿವಿಲ್ಲದಿರುವಿಕೆ.
  7. ಮುಗ್ಧತೆ ಸೋಗು; ಋಜುತ್ವದ ವೇಷ; ಅಕೃತ್ರಿಮವೆಂದು ತೋರ್ಪಡಿಸಿಕೊಳ್ಳುವಿಕೆ; ನಿಷ್ಕಪಟತೆಯ ನಟನೆ.