innings ಇನಿಂಗ್‍’
ನಾಮವಾಚಕ
(ಬಹುವಚನ ಅದೇ ಯಾ ಆಡುಮಾತು inningses).
  1. (ಕ್ರಿಕೆಟ್‍ ಮೊದಲಾದವಲ್ಲಿ) ಇನಿಂಗ್ಸು:
    1. (ಒಂದು ಪಕ್ಷವು ಆಡಿದ) ಆಟದ – ಸೂಳು, ಸರದಿ.
    2. ಒಂದು ಸರದಿಯ ಆಟ.
    3. ತನ್ನ ಸರದಿಯಲ್ಲಿ ಬ್ಯಾಟುಗಾರನು ಆಡಿದ ಆಟ.
  2. (ರೂಪಕವಾಗಿ) (ರಾಜಕೀಯ ಪಕ್ಷ, ತತ್ತ್ವ, ವಾದ, ಮೊದಲಾದವುಗಳ) ಸರದಿ; ಅಧಿಕಾರಾವಧಿ; (ಪ್ರಾಬಲ್ಯ) ಕಾಲ; ದೆಶೆ; ಉಚ್ಛ್ರಾಯ; ಮೇಲುಗೈ: the new ideas of ‘peace and reform’ got their innings ‘ಶಾಂತಿ ಮತ್ತು ಸುಧಾರಣೆ’ ಎಂಬ ಹೊಸ ಭಾವನೆಗಳಿಗೆ ದೆಶೆಯೊದಗಿತು.
  3. ಸಾಧನಕಾಲ; ಒಬ್ಬ ವ್ಯಕ್ತಿಯು ಯಾವುದನ್ನೇ ಸಾಧಿಸಬಹುದಾದ ಕಾಲ.
  4. (ಆಡುಮಾತು) ಇನಿಂಗ್ಸು; ಒಬ್ಬನ ಆಯುರ್ದಾಯ; ಆಯುಸ್ಸು: had a good innings and died at 94 ಒಳ್ಳೆಯ ಆಯುಷ್ಮಂತನಾಗಿ 94ನೆ ವಯಸ್ಸಿನಲ್ಲಿ ತೀರಿಕೊಂಡ.