inlet ಇನ್‍ಲೆ(ಲಿ)ಟ್‍
ನಾಮವಾಚಕ
  1. ಖಾರಿ; ಕಡಲಚಾಚು; ಕಡಲಕೈ; ಕಡಲ ತೋಳು; ಸಮುದ್ರದ ಯಾ ಸರೋವರದ ಸಣ್ಣ ಒಳಜಾಡು.
  2. ಹದ್ದಿಸಿದ ತುಂಡು; ಮುಖ್ಯವಾಗಿ ಉಡುಪು ತಯಾರಿಸುವಲ್ಲಿ, ಒಳ ಜೋಡಿಸಿದ ಚೂರು.
  3. ಪ್ರವೇಶದ್ವಾರ; ಒಳಕ್ಕೆ ಹೋಗುವ ದಾರಿ: oil inlets ತೈಲ ದ್ವಾರಗಳು.