See also 2inlay
1inlay ಇನ್‍ಲೇ
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ inlaid).
  1. (ಎರಡು ವಸ್ತುಗಳ ಮೇಲ್ಮೈಯೂ ಒಂದೇ ಸಮನಾಗಿರುವಂತೆ ಒಂದು ವಸ್ತುವನ್ನು ಮತ್ತೊಂದರಲ್ಲಿ) ಹುದುಗಿಸು; ಹದಿ; ಮೆಟ್ಟು; ಕೂರಿಸು; ಕೊರೆದು ಹುಗಿ; ಕೊರೆದಿಡು: a cave inlaid in a precipice ಪ್ರಪಾತದಲ್ಲಿ ಹುದುಗಿರುವ ಗುಹೆ.
  2. (ಬೇರೊಂದು ವಸ್ತುವನ್ನು ಹುದುಗಿಸಿ) ಅಲಂಕರಿಸು; ಕೂರಿಸು; ಖಚಿತಗೊಳಿಸು; ಕೆತ್ತಿಕೂಡಿಸು; ಕೊರೆದು ಇಡು; ಖಚಿತಮಾಡು: ivory inlaid with gold ಚಿನ್ನವನ್ನು ಹುದುಗಿಸಿದ ದಂತ.
  3. (ದೊಡ್ಡ ದಪ್ಪ ಪುಟದಲ್ಲಿ ಕತ್ತರಿಸಿದ ಜಾಗದಲ್ಲಿ ಪುಟ, ಫಲಕ ಯಾ ಚಿತ್ರಕೊರೆತವನ್ನು) ಹದ್ದಿಸು; ಒಳಸೇರಿಸು; ಒಳಜೋಡಿಸು; ಅಂತರ್ನಿವೇಶಿಸು.
See also 1inlay
2inlay ಇನ್‍ಲೇ
ನಾಮವಾಚಕ
  1. ಕುಂದಣ; ಕೆತ್ತನೆ; ಕೆತ್ತನೆಯ ಕೆಲಸ.
  2. ಕೆತ್ತನೆ ಮಾಡಿ ಕೂರಿಸಿದ ವಸ್ತು.
  3. ಹಲ್ಲಿನ ಡೊಗರನ್ನು ತುಂಬಲು ಅದರ ಆಕಾರದಲ್ಲೇ ಮಾಡಿದ ವಸ್ತು; ಹಲ್ಲುಭರ್ತಿ.