See also 2inland  3inland
1inland ಇನ್‍ಲಂ(ಲ್ಯಾಂ)ಡ್‍
ನಾಮವಾಚಕ

ಒಳನಾಡು; ಅಂತರ್ದೇಶ; ದೇಶದ ಒಳಭಾಗ; ಕರಾವಳಿಯಿಂದ ಯಾ ಗಡಿಯಿಂದ ದೂರವಿರುವ ಪ್ರದೇಶ.

See also 1inland  3inland
2inland ಇನ್‍ಲಂ(ಲ್ಯಾಂ)ಡ್‍
ಗುಣವಾಚಕ
  1. ಒಳನಾಡಿನಲ್ಲಿರುವ; ಸಮುದ್ರಕ್ಕೆ ಯಾ ಎಲ್ಲೆಗೆ ಬಹುದೂರದಲ್ಲಿರುವ; ಅಂತರ್ದೇಶಿ.
  2. ಒಳದೇಶದ; ಒಳನಾಡಿನ; ಅಂತರ್ದೇಶೀಯ; ದೇಶದ ಎಲ್ಲೆಯೊಳೆಗೆ ನಡೆಯುವ: inland trade ಒಳದೇಶದ ವ್ಯಾಪಾರ, ಅಂತರ್ದೇಶೀಯ ವ್ಯಾಪಾರ. inland duty ಒಳನಾಡಿನ (ವ್ಯಾಪಾರದ ಮೇಲಿನ) ಸುಂಕ; ಅಂತರ್ದೇಶಿಯ ಸುಂಕ. inland revenue (ತೆರಿಗೆ ಮತ್ತು ಒಳಸುಂಕಗಳೂ ಸೇರಿದ) ಒಳನಾಡಿನ ಉತ್ಪತ್ತಿ; ಅಂತರ್ದೇಶೀಯ ಉತ್ಪನ್ನ; ಒಳದೇಶದ ಆದಾಯ, ಹುಟ್ಟುವಳಿ.
See also 1inland  2inland
3inland ಇನ್‍ಲಂ(ಲ್ಯಾಂ)ಡ್‍
ಕ್ರಿಯಾವಿಶೇಷಣ

ನಾಡಿನೊಳಗೆ; ನಾಡಿನ ಒಳಭಾಗದಲ್ಲಿ; ಒಳನಾಡಿನಲ್ಲಿ; ಒಳನಾಡಿನ ಕಡೆಗೆ; ಅಂತರ್ದೇಶೀಯವಾಗಿ.