See also 2ink
1ink ಇಂಕ್‍
ನಾಮವಾಚಕ
  1. (ಕಪ್ಪು, ಕೆಂಪು, ಮೊದಲಾದ ಬಣ್ಣಗಳ) ಶಾಯಿ; ಮಸಿ.
  2. ಅಚ್ಚುಮಸಿ; ಮುದ್ರಣ ಮಾಡಲು ಬಳಸುವ ಜಿಗುಟಾದ, ಸಾಂದ್ರ ಅಂಟು.
  3. (ಕಟ್‍ಲ್‍ ಈನು, ಆಕ್ಟೊಪಸ್‍, ಮೊದಲಾದವು ತಪ್ಪಿಸಿಕೊಳ್ಳಲು ಸಹಾಯವಾಗುವಂತೆ ಒಳಚರ್ಮದ ಚೀಲದಿಂದ ಚಿಮ್ಮುವ) ಮಸಿ; ಕಪ್ಪುದ್ರವ.
See also 1ink
2ink ಇಂಕ್‍
ಸಕರ್ಮಕ ಕ್ರಿಯಾಪದ
  1. ಮಸಿ ಬಳಿ; ಶಾಯಿ ಹಚ್ಚು; ಮಸಿಯಿಂದ ಗುರುತುಮಾಡು.
  2. (ಮುದ್ರಣ ಮಾಡಲು ಅಚ್ಚುಮೊಳೆ ಮೊದಲಾದವಕ್ಕೆ) ಶಾಯಿಹಚ್ಚು; ಮಸಿ ಸವರು; ಇಂಕು – ಬಳಿ, ಹಚ್ಚು.
ಪದಗುಚ್ಛ

ink out ಮಸಿ ಬಳಿದು – ತೊಡೆದು ಹಾಕು, ಅಳಿಸು.