injurious ಇನ್‍ಜುಅರಿಅಸ್‍
ಗುಣವಾಚಕ
  1. ಅನ್ಯಾಯದ; ಕೇಡುಮಾಡುವ; ಕೆಡುಕುಮಾಡುವ; ಅಪಚಾರವೆಸಗುವ: injurious behaviour ಅನ್ಯಾಯದ ವರ್ತನೆ.
  2. (ಭಾಷೆಯ ವಿಷಯದಲ್ಲಿ) ಹೀನಯಿಸುವ; ಅವಮಾನಕರ; ತೆಗಳಿಕೆಯ; ದೂಷಣೆಯ; ನಿಂದೆಯ; ಜರೆತದ: speak not injurious words ತೆಗಳಿಕೆಯ ಮಾತುಗಳನ್ನು ಆಡಬೇಡ.
  3. ಹಾನಿಕರ; ಅಪಾಯಕರ; ಕೆಡುಕುಮಾಡುವ: injurious eating habits ಕೆಡಕುಂಟು ಮಾಡುವ ತಿನ್ನುವ ಚಾಳಿಗಳು.