injunction ಇನ್‍ಜಂಕ್‍ಷನ್‍
ನಾಮವಾಚಕ
  1. ಅಧಿಕಾರ ಪೂರ್ವಕವಾದ – ವಾಗ್ದಂಡ, ಆಜ್ಞೆ, ಕಟ್ಟಳೆ, ಆಣತಿ, ಹುಕುಂ, ಆದೇಶ, ತಡೆಗಟ್ಟಳೆ: he laid an injunction of secrecy on me ರಹಸ್ಯವಾಗಿಡಬೇಕೆಂಬ ಕಟ್ಟಳೆಯನ್ನು ಅವನು ನನ್ನ ಮೇಲೆ ವಿಧಿಸಿದನು.
  2. (ನ್ಯಾಯಶಾಸ್ತ್ರ) (ತಪ್ಪಿತ ಮಾಡದಂತೆ ವ್ಯಕ್ತಿಯನ್ನು ಪ್ರತಿಬಂಧಿಸುವ, ನಿರ್ಬಂಧಿಸುವ) ತಡೆಯಾಣತಿ; ತಡೆಯಪ್ಪಣೆ; ತಡೆಯಾಜ್ಞೆ; ಪ್ರತಿಬಂಧಕಾಜ್ಞೆ; ನಿಷೇಧಾದೇಶ: he procured an injunction to hinder me from felling timber in his land ಅವನ ಜಈನಿನಲ್ಲಿರುವ ಮರವನ್ನು ನಾನು ಕಡಿಯದಂತೆ ಮಾಡಲು ಅವನು ತಡೆಯಾಜ್ಞೆಯನ್ನು ತಂದನು.
  3. (ನ್ಯಾಯಶಾಸ್ತ್ರ) (ನಷ್ಟ, ಹಾನಿಗಳಿಗೆ ಗುರಿಯಾದವನಿಗೆ ಅದನ್ನು ಕಟ್ಟಿಕೊಡಲು ಕಾನೂನುರೀತ್ಯಾ ವಿಧಿಸುವ) ಪರಿಹಾರಕ್ರಮ; ನಷ್ಟ ಪರಿಹಾರಾಜ್ಞೆ.