inject ಇನ್‍ಜೆಕ್ಟ್‍
ಸಕರ್ಮಕ ಕ್ರಿಯಾಪದ
  1. (ನಾಳ ಮೊದಲಾದವುಗಳ ಒಳಗೆ ಸ್ರವವನ್ನು, ಔಷಧವನ್ನು ಪಿಚಕಾರಿಯಿಂದ ಮಾಡುವಂತೆ) ಒಳಹೊಗಿಸು; ಒಳನುಗ್ಗಿಸು; ಚುಚ್ಚು.
  2. (ಕೋಶ ಮೊದಲಾದವನ್ನು) ಚುಚ್ಚಿತುಂಬು, ಹೊಗಿಸು.
  3. (ವ್ಯಕ್ತಿಗೆ) ಇಂಜೆಕ್ಷನ್‍ ಕೊಡು; ಚುಚ್ಚುಮದ್ದಿನ ಮೂಲಕ ಔಷಧಿ ಮೊದಲಾದವನ್ನು ಕೊಡು.
  4. (ವಸ್ತು, ಗುಣ, ಮೊದಲಾದವನ್ನು ಯಾವುದಾದರೊಂದರ) ಒಳಕ್ಕೆ – ಇಡು, ಸೇರಿಸು, ತುಂಬು, ಕೊಡು: may I inject a note of realism? ನಾನೊಂದು ವಾಸ್ತವಿಕತೆಯ ಧ್ವನಿಯನ್ನು ಸೇರಿಸಲೆ?