See also 2initiative
1initiative ಇನಿಷಟಿವ್‍, ಇನಿಷಿಅಟಿವ್‍
ನಾಮವಾಚಕ
  1. ಮೊದಲ ಹೆಜ್ಜೆ; ಪ್ರಾರಂಭ; ತೊಡಗುವಿಕೆ.
  2. ಆರಂಭ ಮಾಡುವ, ಮುಂತೊಡಗುವ – ಶಕ್ತಿ, ಹಕ್ಕು: have the initiative ಆರಂಭ ಶಕ್ತಿ, ಅಧಿಕಾರ ಪಡೆದಿರು.
  3. (ಮುಖ್ಯವಾಗಿ ನಿಷೇಧಕ ಪದದೊಡನೆ ಯಾ ನಿಷೇಧಾರ್ಥ ಸೂಚಿಸುವಂಥ ಪದದೊಡನೆ) ಉದ್ಯಮಶೀಲತೆ; ಪ್ರವರ್ತನ ಶಕ್ತಿ; ಉಪಕ್ರಮ ಶಕ್ತಿ, ಸಾಮರ್ಥ್ಯ, ಸಾಹಸ; (ವಸ್ತು, ಉದ್ಯಮಗಳನ್ನು) ಪ್ರವರ್ತನಗೊಳಿಸುವ ಶಕ್ತಿ: he lacks initiative; he has little or no initiative ಅವನಲ್ಲಿ ಪ್ರವರ್ತನ ಸಾಮರ್ಥ್ಯವಿಲ್ಲ; ಅವನಲ್ಲಿ ಸಾಹಸ ಬುದ್ಧಿ ಕಡಿಮೆ.
  4. (ಮುಖ್ಯವಾಗಿ ಸ್ವಿಟ್ಸರ್ಲಂಡ್‍ ಹಾಗೂ ಕೆಲವು ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿರುವಂತೆ) ಶಾಸನಹಕ್ಕು ಕಾನೂನು ಮಾಡುವ ಹಕ್ಕು; (ಶಾಸನಸಭೆಯ ಹೊರಗಿರುವ ಪ್ರಜೆಗಳು) ಹೊಸ ಶಾಸನವನ್ನು ರಚಿಸುವ ಹಕ್ಕು.
ನುಡಿಗಟ್ಟು
  1. have the initiative (ಸೈನ್ಯ) ತನ್ನ ಚಲನೆಗಳಿಗೆ ತಕ್ಕಂತೆ ಶತ್ರುವು ವರ್ತಿಸುವಂತೆ ಮಾಡು.
  2. on one’s own initiative ಸ್ವಪ್ರೇರಣೆಯಿಂದ; ಇತರರ ಪ್ರೇರಣೆಯಿಂದಲ್ಲದೆ.
  3. take the initiative (ಮಾಡುವುದಕ್ಕೆ) ಮುಂತೊಡಗು; ಮುಂದಾಗು; ಮುಂದಾಳತ್ವ ವಹಿಸು; ಮೊದಲ ಹೆಜ್ಜೆಯಿಡು; ಕಾರ್ಯ ಪ್ರಾರಂಭಿಸು; ಉಪಕ್ರಮಿಸು: no reform can produce real good unless the people themselves take the initiative ಜನ ತಾವೇ ಕೆಲಸ ಮಾಡಲು ಮುಂತೊಡಗುವ ತನಕ ಯಾವ ಸುಧಾರಣೆಯೂ ಒಳಿತನ್ನುಂಟುಮಾಡಲಾರದು.
See also 1initiative
2initiative ಇನಿಷಟಿವ್‍, ಇನಿಷಅಟಿವ್‍
ಗುಣವಾಚಕ

ಆರಂಭಿಸುವ; ಆರಂಭದ; ಉಪಕ್ರಮದ; ಪೂರ್ವಭಾವಿಯಾದ; ಪ್ರವೇಶಗೊಳಿಸುವ: it was initiative to a higher progress ಅದು ಇನ್ನೂ ಉನ್ನತ ಪ್ರಗತಿಗೆ ಪೂರ್ವಭಾವಿಯಾಗಿತ್ತು.